Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮೀ ಟೂ ಅಭಿಯಾನದಲ್ಲಿ ಖ್ಯಾತ ನಟ ಬಿಗ್ ಬಿ ಮೇಲೆ ಆರೋಪ

webdunia
ಭಾನುವಾರ, 14 ಅಕ್ಟೋಬರ್ 2018 (06:50 IST)
ಮುಂಬೈ : ಇತ್ತೀಚೆಗೆ ಆರಂಭವಾದ MeToo ಅಭಿಯಾನದಲ್ಲಿ ಅನೇಕ ಖ್ಯಾತ ವ್ಯಕ್ತಿಗಳ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿತ್ತು. ಆದರೆ ಇದೀಗ ಬಾಲಿವುಡ್ ಖ್ಯಾತ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಮೇಲೂ ಈ ರೀತಿಯ ಆರೋಪವೊಂದು ಕೇಳಿಬಂದಿದೆ.


ನಟ ಅಮಿತಾಬ್ ಬಚ್ಚನ್ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ 'ಯಾವುದೇ ಮಹಿಳೆಯ ಮೇಲಾಗುವ ದೌರ್ಜನ್ಯ ಹಾಗೂ ಕೆಟ್ಟ ಸಂಪ್ರದಾಯವನ್ನು ವಿರೋಧಿಸುತ್ತೇನೆ. ಅದರಲ್ಲೂ ಕೆಲಸ ಮಾಡುವ ಸ್ಥಳದಲ್ಲಿ ಹೀಗಾಗುವುದನ್ನು ಖಂಡಿಸುತ್ತೇನೆ. ಹೀಗಾದಾಗ ತಡ ಮಾಡದೆ ಕೆಟ್ಟದಾಗಿ ವರ್ತಿಸುವವರ ವಿರುದ್ಧ ದೂರು ನೀಡಿ ಕ್ರಮ ಕೈಗೊಳ್ಳಬೇಕೆಂದು ಹೇಳಿದ ಹೇಳಿಕೆಯನ್ನು ಟ್ವೀಟರ್ ನಲ್ಲಿ ಲಿಂಕ್ ಮಾಡಿದ್ದರು.


ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ  ಸೆಲೆಬ್ರಿಟಿ ಹೇರ್​ ಸ್ಟೈಲಿಸ್ಟ್​ ಸಪ್ನಾ ಭವನಾನಿ, ಇದು ಬಹುದೊಡ್ಡ ಸುಳ್ಳು. ಸರ್​, ಪಿಂಕ್​ ಸಿನಿಮಾ ಬಂದು ಹೋಗಿದೆ, ಅದೇ ರೀತಿ ಹೋರಾಟಗಾರರಂತೆ ನಿಮ್ಮ ವ್ಯಕ್ತಿತ್ವವೂ ಶೀಘ್ರದಲ್ಲೇ ಮರೆಯಾಗಲಿದೆ. ನಿಮ್ಮ ನಿಜ ಬಣ್ಣ ಶೀಘ್ರದಲ್ಲೇ ಜಗತ್ತಿನೆದುರು ತೆರೆದುಕೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.


ಆಮೇಲೆ ಮತ್ತೊಂದು ಟ್ವೀಟ್ ಮಾಡಿ ಅಮಿತಾಬ್​ ಬಚ್ಚನ್​ರವರು ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿಲ್ಲ. ಆದರೆ ಬಿಗ್​ ಬಿ ಕೆಟ್ಟದಾಗಿ ನಡೆಸಿಕೊಂಡಿರುವ ಹಲವಾರು ಮಂದಿ ತನಗೆ ಗೊತ್ತು ಎಂದಿದ್ದಾರೆ. ಅಲ್ಲದೇ ಅವರು ಕೆಟ್ಟದಾಗಿ ನಡೆಸಿಕೊಂಡ ಮಹಿಳೆಯರು ಯಾವುದೇ ಭಯವಿಲ್ಲದೇ ಮಾತನಾಡಬೇಕೆಂಬ ನಿಟ್ಟಿನಲ್ಲಿ ತಾನು ಈ ಟ್ವೀಟ್​ ಮಾಡಿರುವುದಾಗಿಯೂ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಹೃತಿಕ್ ರೋಶನ್ ಜೊತೆ ಯಾರೂ ಕೂಡ ಸಿನಿಮಾ ಮಾಡಬಾರದು ಎಂದು ಕಂಗನಾ ಹೇಳಿದ್ಯಾಕೆ?