Select Your Language

Notifications

webdunia
webdunia
webdunia
webdunia

ಬಿಸಿಸಿಐ ಸಿಇಒ ಮೇಲೆ ಲೈಂಗಿಕ ಕಿರುಕುಳ ಆರೋಪ

ಬಿಸಿಸಿಐ ಸಿಇಒ ಮೇಲೆ ಲೈಂಗಿಕ ಕಿರುಕುಳ ಆರೋಪ
ಮುಂಬೈ , ಶನಿವಾರ, 13 ಅಕ್ಟೋಬರ್ 2018 (09:57 IST)
ಮುಂಬೈ: ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಮೇಲೆ ಪತ್ರಕರ್ತೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ.

ಇತ್ತೀಚೆಗೆ ಲೈಂಗಿಕ ಕಿರುಕುಳದ ವಿರುದ್ಧ ಆರಂಭವಾಗಿರುವ ಮಿ ಟೂ ಅಭಿಯಾನದ ಅಂಗವಾಗಿ ಮಹಿಳಾ ಪತ್ರಕರ್ತೆಯೊಬ್ಬರು ಬಿಸಿಸಿಐ ಸಿಇಒ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಇದಕ್ಕೆ ಹಲವು ಈಮೇಲ್ ಸಾಕ್ಷ್ಯಗಳು ಇವೆ ಎಂದು ಪತ್ರಕರ್ತೆ ಹೇಳಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಹಲವು ನಟರ ವಿರುದ್ಧ ಆರೋಪ ಬರುತ್ತಿರುವ ಬೆನ್ನಲ್ಲೇ ಇದೀಗ ಕ್ರಿಕೆಟ್ ವಲಯದಲ್ಲೂ ಇದೇ ಆರೋಪಗಳು ಬರುತ್ತಿವೆ. ಇದಕ್ಕೂ ಮೊದಲು ಗಾಯಕಿಯೊಬ್ಬರು ಕ್ರಿಕೆಟಿಗ ಲಸಿತ್ ಮಲಿಂಗಾ ಮತ್ತು ಅರ್ಜುನ್ ರಣತುಂಗಾ ಮೇಲೆ ಆರೋಪ ಹೊರಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗೆ ಚುಂಬಿಸಲು ಮೈದಾನಕ್ಕೇ ಓಡಿ ಬಂದ ಅಭಿಮಾನಿ