Publish Date: Sat, 13 Oct 2018 (08:59 IST)
Updated Date: Sat, 13 Oct 2018 (09:01 IST)
ಮುಂಬೈ: ವಿದೇಶ ಪ್ರವಾಸದ ವೇಳೆ ಪತ್ನಿಯರನ್ನು ಸುದೀರ್ಘ ಅವಧಿಗೆ ಜತೆಗಿಟ್ಟುಕೊಳ್ಳಲು ಅವಕಾಶ ಕೊಡಬೇಕೆಂಬ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನವಿಗೆ ಬಿಸಿಸಿಐ ಪರಿಗಣಿಸಿದೆ.
ಮುಂಬೈನಲ್ಲಿ ಬಿಸಿಸಿಐ ಕಚೇರಿಯಲ್ಲಿ ನಡೆದ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನಲಾಗಿದೆ. ಕೊಹ್ಲಿ ಹೇಳಿದಂತೆ ಪ್ರವಾಸದುದ್ದಕ್ಕೂ ಅಲ್ಲದಿದ್ದರೂ ಕೊಂಚ ಹೆಚ್ಚು ಸಮಯ ಕುಟುಂಬದವರ ಜತೆ ಕಾಲ ಕಳೆಯಲು ಅವಕಾಶ ನೀಡುವ ಸಾಧ್ಯತೆಯಿದೆ.
ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೆಲವು ದಿನಗಳ ಕಾಲ ಫ್ಯಾಮಿಲಿ ಸಮಯ ಎಂದೂ ಅವಧಿ ವಿಸ್ತರಿಸುವ ಸಾಧ್ಯತೆಯಿದೆ. ಆದರೆ ವಿಶ್ವಕಪ್ ಸಂದರ್ಭದಲ್ಲಿ ಈ ನಿಯಮದಲ್ಲಿ ಬದಲಾವಣೆ ಮಾಡದೇ ಇರಲು ಬಿಸಿಸಿಐ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.