Publish Date: Fri, 12 Oct 2018 (07:18 IST)
Updated Date: Fri, 12 Oct 2018 (07:19 IST)
ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಡಿಆರ್ ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ, ಬೌಲರ್ ಗಳಿಗೆ ಸಲಹೆ ಕೊಡುವ ವಿಚಾರದಲ್ಲಿ ಸದಾ ಮುಂದು. ಅದರ ಹಿಂದಿನ ರಹಸ್ಯವೇನೆಂದು ಸ್ಪಿನ್ನರ್ ಯಜುವೇಂದ್ರ ಚಾಹಲ್ ಬಹಿರಂಗಪಡಿಸಿದ್ದಾರೆ.
‘ನನಗೆ ಬೌಲಿಂಗ್ ನಲ್ಲಿ ಏನೇ ಅನುಮಾನ ಬಂದರೂ ತಕ್ಷಣ ಧೋನಿ ಬಾಯ್ ಬಳಿ ಹೋಗುತ್ತೇನೆ. ಅವರು ಸರಿಯಾಗಿ ಸಲಹೆ ಕೊಡುತ್ತಾರೆ’ ಎಂದು ಯಜುವೇಂದ್ರ ಚಾಹಲ್ ಹೇಳಿದ್ದಾರೆ.
‘ಬೌಲರ್ ಗಳ ಮನಸ್ಥಿತಿ, ಅವರ ಗೊಂದಲಗಳನ್ನು ಧೋನಿ ಅವರ ದೇಹ ಭಾಷೆಯಿಂದಲೇ ಅರ್ಥ ಮಾಡಿಕೊಳ್ಳುತ್ತಾರೆ. ನಾನು ಹೇಳದೆಯೇ ಅವರಿಗೆ ನನ್ನ ಸಮಸ್ಯೆ ಅರ್ಥವಾಗುತ್ತದೆ. ನನಗೆ ಮಾತ್ರವಲ್ಲ, ಎಲ್ಲಾ ಬೌಲರ್ ಗಳ ದೇಹ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅವರು ನಿಪುಣರು. ಹೀಗಾಗಿ ಎಲ್ಲರೂ ಏನೇ ಸಮಸ್ಯೆ ಬಂದರೂ ಅವರ ಬಳಿ ಹೋಗುತ್ತಾರೆ’ ಯಜುವೇಂದ್ರ ಚಾಹಲ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.