Publish Date: Fri, 12 Oct 2018 (07:14 IST)
Updated Date: Fri, 12 Oct 2018 (07:15 IST)
ಕೊಲೊಂಬೋ: ಶ್ರೀಲಂಕಾದ ಖ್ಯಾತ ವೇಗಿ, ಐಪಿಎಲ್ ನ ಮುಂಬೈ ಇಂಡಿಯನ್ಸ್ ಆಟಗಾರ ಲಸಿತ್ ಮಾಲಿಂಗ ಲೈಂಗಿಕ ಕಿರುಕುಳ ಆರೋಪಕ್ಕೊಳಗಾಗಿದ್ದಾರೆ.
ಮುಂಬೈನ ಹೋಟೆಲ್ ಒಂದರಲ್ಲಿ ಮಹಿಳೆ ಮೇಲೆ ಮಲಿಂಗಾ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಗಾಯಕಿ ಚಿನ್ಮಯಿ ಶ್ರೀಪಾದ ಈ ಆರೋಪ ಮಾಡಿದ್ದಾರೆ.
ಮಾಲಿಂಗಾ ಅಲ್ಲದೆ, ಲಂಕಾದ ಇನ್ನೊಬ್ಬ ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗಾ ಕೂಡಾ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಈ ಘಟನೆಯನ್ನು ಆಕೆ ಟ್ವಿಟರ್ ಮೂಲಕ ವಿವರಿಸಿದ್ದಾರೆ.
‘ಹಿಂದೊಮ್ಮೆ ಐಪಿಎಲ್ ಆಡಲು ಬಂದಿದ್ದಾಗ ಲಸಿತ್ ಮಾಲಿಂಗ ನನ್ನ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದರು. ನಾನು ನನ್ನ ಸ್ನೇಹಿತೆಯನ್ನು ಹುಡುಕಿಕೊಂಡು ಹೋಗುತ್ತಿದ್ದಾಗ ಅಕಸ್ಮಾತ್ತಾಗಿ ಲಂಕಾದ ಖ್ಯಾತ ಕ್ರಿಕೆಟಿಗ ಮಾಲಿಂಗ ಕೊಠಡಿಗೆ ಹೋಗಿದ್ದೆ. ಆದರೆ ಆತ ಕೂಡಲೇ ನನ್ನನ್ನು ಹಾಸಿಗೆಗೆ ಕೆಡವಿ ನನ್ನ ಮೇಲೆರಗಿದ್ದ. ಆದರೆ ನಾನು ನೀಳಕಾಯದವಳಾಗಿದ್ದರಿಂದ ಆತನನ್ನು ತಳ್ಳಿದ್ದೆ. ಅಷ್ಟರಲ್ಲಿ ಹೋಟೆಲ್ ಸಿಬ್ಬಂದಿ ಬಾಗಿಲು ತಟ್ಟಿದ್ದರಿಂದ ಅಲ್ಲಿಂದ ತಪ್ಪಿಸಿಕೊಂಡಿದ್ದೆ’ ಎಂದು ಶ್ರೀಪಾದ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.