Publish Date: Sun, 12 Aug 2018 (08:30 IST)
Updated Date: Sun, 12 Aug 2018 (08:31 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ಆರಂಭಿಕ ಸ್ಥಾನ ಪಡೆದೂ ಕಳಪೆ ಮೊತ್ತಕ್ಕೆ ಔಟಾಗಿದ್ದಕ್ಕೆ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ತಂಡ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಮಳೆ ಬಂದು ಪಂದ್ಯ ನಿಂತ ಸಮಯದಲ್ಲಿ ಕೆಎಲ್ ರಾಹುಲ್ ಅಭ್ಯಾಸ ಮಾಡುವ ವಿಡಿಯೋ ಪ್ರಕಟಿಸಿತ್ತು. ಇದಕ್ಕೆ ಅಭಿಮಾನಿಗಳು ಟೀಕೆ ಮಾಡಿದ್ದಾರೆ.
ಈತ ಐಪಿಎಲ್ ಗಳಲ್ಲಿ ಆಡಲು ಮತ್ತು ಮಾಡೆಲಿಂಗ್ ಮಾಡಲಷ್ಟೇ ಲಾಯಕ್ಕು. ಈತನಿಗಿಂತ ಚೆನ್ನಾಗಿ ಗಲ್ಲಿ ಕ್ರಿಕೆಟ್ ಆಡುವವರು ಆಡ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಇದೇ ಕಾಮೆಂಟ್ ಗಳಿಗೆ ರಾಹುಲ್ ಅಭಿಮಾನಿಗಳು ಪ್ರತ್ಯುತ್ತರವನ್ನೂ ನೀಡಿದ್ದಾರೆ. ರಾಹುಲ್ ತಾಂತ್ರಿಕವಾಗಿ ಕೊಹ್ಲಿಗಿಂತಲೂ ಕ್ಲಾಸ್ ಪ್ಲೇಯರ್. ಒಂದು ಸರಣಿಯಲ್ಲಿ ವಿಫಲರಾಗಿದ್ದಕ್ಕೆ ಅವರನ್ನು ಅಪಾರ್ಥ ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.