ಮುಂಬೈ: ನಟಿ ಸನ್ನಿ ಲಿಯೋನ್ ಯಾರಿಗೆ ಗೊತ್ತಿಲ್ಲ ಹೇಳಿ. ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ ನಂತರ ಈಗ ಸನ್ನಿ ಲಿಯೋನ್ ಮಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರಂತೆ. ಔಟ್ ಆ್ಯಂಡ್ ಔಟ್ ಕಾಮಿಡಿ ಚಿತ್ರದಲ್ಲಿ ಸನ್ನಿ ನಟಿಸುತ್ತಿದ್ದಾರಂತೆ.
ವೀರಮಹಾದೇವಿ ಅನ್ನೋ ಮಲ್ಟಿಲಾಂಗ್ವೇಜ್ ಸಿನಿಮಾದಲ್ಲಿ ಆ್ಯಕ್ಟ್ ಮಾಡುವ ಮೂಲಕ ತೆಲುಗು ತಮಿಳಿಗೆ ಬಂದಿದ್ದ ಸನ್ನಿ, ಈಗ ಮಲಯಾಳಂನಲ್ಲಿ ನಾಯಕಿಯಾಗುತ್ತಿದ್ದಾರೆ.
ಸನ್ನಿ ನಟಿಸುತ್ತಿರುವ ಈ ಸಿನಿಮಾ ಫುಲ್ ಕಾಮಿಡಿ ಆಗಿದೆಯಂತೆ. ಒರ್ಮ ಲಾಲು ನಿರ್ಮಾಣ ಮಾಡುತ್ತಿದ್ದಾರೆ. ಜಯರಾಮ ಧರ್ಮರಾಜನ್ ಬಾಲಗಟ್ಟಿ ಹಾಗೂ ಹನಿರೋಸ್ ಮತ್ತು ವಿನಯ್ ಫೋರ್ಟ್ ಈ ಚಿತ್ರದಲ್ಲಿ ಸನ್ನಿಲಿಯೋನ್ ಜತೆ ನಟಿಸುತ್ತಿದ್ದಾರೆ.
ಸನ್ನಿ ಲಿಯೋನ್ ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿರುವುದರಿಂದ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರಂತೆ.