Publish Date: Mon, 06 Aug 2018 (14:14 IST)
Updated Date: Mon, 06 Aug 2018 (14:17 IST)
ಬೆಂಗಳೂರು: ಅಭಿಮಾನಿಗಳ ವಿಷಯಕ್ಕೆ ಬಂದರೆ ಒಬ್ಬೊಬ್ಬ ನಟರದ್ದು ಒಂದೊಂದು ರೀತಿ ನಡವಳಿಕೆ ಇರುತ್ತದೆ. ಕೆಲವರು ಎಲ್ಲರಿಂದಲೂ ತುಂಬಾ ದೂರ ಇರುತ್ತಾರೆ. ಇನ್ನು ಕೆಲವರು ಅಭಿಮಾನಿಗಳ ಜತೆ ಯಾವ ಹಮ್ಮು ಬಿಮ್ಮು ಇಲ್ಲದೇ ಚೆನ್ನಾಗಿ ಇರುತ್ತಾರೆ. ನಟ ದರ್ಶನ್ ಕೂಡ ಈ ಸಾಲಿಗೆ ಸೇರಿದ್ದಾರೆ.
ನಟ ದರ್ಶನ ತಮ್ಮ ಬಳಿ ಯಾರೇ ಬಂದರು ಪ್ರೀತಿಯಿಂದ ಮಾತನಾಡಿಸಿ ಆಟೋಗ್ರಾಫ್ ಕೊಡುತ್ತಾರೆ. ಇದರಿಂದ ಅಭಿಮಾನಿಗಳಿಗೆ ದರ್ಶನ್ ಎಂದರೆ ತುಸು ಪ್ರೀತಿ ಹೆಚ್ಚು. ದರ್ಶನ್ ಇತ್ತೀಚೆಗೆ ತನ್ನ ಬಳಿ ಬಂದ ವಿಕಲಚೇತನ ಅಭಿಮಾನಿಯೊಬ್ಬರಿಗೆ ಊಟ ಮಾಡಿಸಿ ಅವರ ಜೊತೆ ಫೋಟೋ ತೆಗೆಸಿಕೊಂಡು ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವದ ಕಾರಣ ದರ್ಶನ್ ಮೈಸೂರಿನಲ್ಲಿರುವ ತಮ್ಮ ಫಾರಂಹೌಸ್ ಗೆ ಹೋಗಿದ್ದರು. ಅಲ್ಲಿ ಚಾಮುಂಡಿ ತಾಯಿಯ ಪೂಜಾ ಮಹೋತ್ಸವ ಏರ್ಪಡಿಸಲಾಗಿತ್ತು. ಈ ವೇಳೆ ಪೂಜಾ ಮಹೋತ್ಸವಕ್ಕೆ ವಿಕಲಚೇತನ ಅಭಿಮಾನಿಯೊಬ್ಬರು ಬಂದಿದ್ದರು. ದರ್ಶನ್ ಅವರನ್ನು ನೋಡಿ ಪ್ರೀತಿಯಿಂದ ಮಾತನಾಡಿಸಿ ಅವರಿಗೆ ಔತಣ ಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ, ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ