Select Your Language

Notifications

webdunia
webdunia
webdunia
webdunia

ಅನುಷಾ ದಾಂಡೇಕರ್ ಹಾಗೂ ಸಿದ್ಧಾರ್ಥ್ ಮಲ್ಯ ಜೊತೆಗಿರುವ ಫೋಟೋ ನೋಡಿ ಅಭಿಮಾನಿಗಳು ಬೇಸರಗೊಂಡಿದ್ಯಾಕೆ?

ಮುಂಬೈ
ಮುಂಬೈ , ಶುಕ್ರವಾರ, 3 ಆಗಸ್ಟ್ 2018 (07:13 IST)
ಮುಂಬೈ : ಇತ್ತೀಚೆಗೆ ನಟಿ ಅನುಷಾ ದಾಂಡೇಕರ್ ಇನ್ಸ್ಟ್ರಾಗ್ರಾಂ ನಲ್ಲಿ ತಮ್ಮ ಗೆಳೆಯನ ಜೊತೆಗಿರುವ ಫೋಟೋವೊಂದನ್ನು ಹಾಕಿ ತಮ್ಮ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.


ನಟಿ ಅನುಷಾ ದಾಂಡೇಕರ್ ಅವರು ಕರಣ್ ಕುಂದ್ರಾ ಅವರ ಜೊತೆ ಲವ್ ಸೀಸನ್ 3 ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಮದ್ಯದ ದೊರೆ ವಿಜಯ್ ಮಲ್ಯ ಮಗ ಸಿದ್ಧಾರ್ಥ್ ಮಲ್ಯ ಜೊತೆಗಿರುವ ಫೋಟೋ ಒಂದನ್ನು ಇನ್ಸ್ಟ್ರಾಗ್ರಾಂ ಗೆ ಹಾಕಿದ್ದಾರೆ.ಜೊತೆಗೆ ಇಬ್ಬರು ಸ್ನೇಹಿತರು ತುಂಬಾ ಸಮಯದ ನಂತರ ಸಿಕ್ಕಾಗ, ಸ್ನೇಹಿತರು ಎಂದೂ ಬೇರೆಯಾಗಿರಲಿಲ್ಲ ಎನ್ನಿಸುತ್ತದೆ. ಲವ್ ಯು ಸಿದ್ಧಾರ್ಥ್ ಎಂದು ಬರೆದುಕೊಂಡಿದ್ದಾರೆ. ಹಾಗೇ ಸಿದ್ಧಾರ್ಥ್ ಕೂಡ ತನ್ನ ಇನ್ಸ್ಟಾ ಗ್ರಾಂ ಅಕೌಂಟ್ ನಲ್ಲಿ ಹಾಕಿದ್ದು, ನಿನ್ನನ್ನು ನೋಡಿ ತುಂಬಾ ಖುಷಿಯಾಯ್ತು ಎಂದು ಬರೆದುಕೊಂಡಿದ್ದಾರೆ.


ಈ ಫೋಟೋ ನೋಡಿ  ನಟಿ ಅನುಷಾ ದಾಂಡೇಕರ್ ಅಭಿಮಾನಿಗಳು ಬೇಸರಗೊಂಡಿದ್ದು, ಭಾರತೀಯ ಬ್ಯಾಂಕ್ ಗಳಿಗೆ ಮೋಸ ಮಾಡಿ ದೇಶ ಬಿಟ್ಟಿರುವ ವ್ಯಕ್ತಿ ಮಗನ ಜೊತೆ ಫೋಟೋ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ರೋಲ್ ಮಾಡಿದವರಿಗೆ ಸರಿಯಾಗಿ ಬೆಂಡೆತ್ತಿದ ನಟಿ ರಶ್ಮಿಕಾ ಮಂದಣ್ಣ