Select Your Language

Notifications

webdunia
webdunia
webdunia
webdunia

ನಟಿ ಅದಿತಿ ರಾವ್ ಈ ಹಿಂದೆ ಕೆಲ ಪ್ರಾಜೆಕ್ಟ್ ಗಳನ್ನು ಕೈಬಿಟ್ಟಿದ್ದು ಇದೇ ಕಾರಣಕ್ಕಾಗಿಯಂತೆ

ನಟಿ ಅದಿತಿ ರಾವ್ ಈ ಹಿಂದೆ ಕೆಲ ಪ್ರಾಜೆಕ್ಟ್ ಗಳನ್ನು ಕೈಬಿಟ್ಟಿದ್ದು ಇದೇ ಕಾರಣಕ್ಕಾಗಿಯಂತೆ
ಬೆಂಗಳೂರು , ಬುಧವಾರ, 1 ಆಗಸ್ಟ್ 2018 (06:32 IST)
ಮುಂಬೈ : ತೆಲುಗು ನಟಿ ಶ್ರೀರೆಡ್ಡಿ ಕಾಸ್ಟಿಂಗ್ ಕೌಚ್ ವಿರೋಧಿಸಿ ಪ್ರತಿಭಟನೆ ಮಾಡಿದ ಮೇಲೆ ಸಿನಿಮಾ ಜೀವನದಲ್ಲಿ ತಾವು ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ನಟಿಯರು ಒಬ್ಬೊಬ್ಬರಾಗಿಯೇ ತಮ್ಮ ಅನುಭವವನ್ನು ಹೊರಹಾಕುತ್ತಿದ್ದಾರೆ. ಇದೀಗ ಸಂಜಯ್ ಲೀಲಾ ಬನ್ಸಾಲಿ ಪದ್ಮಾವತ್ ಚಿತ್ರದಲ್ಲಿ ಮೆಹರುನ್ನಿಸಾ ಪಾತ್ರದಲ್ಲಿ ನಟಿಸಿರುವ ನಟಿ ಅದಿತಿ ರಾವ್ ಸಿನಿಮಾ ಜೀವನದಲ್ಲಿ  ತಮಗಾದ ಕೆಟ್ಟ ಅನುಭವವನ್ನು ಹೇಳಿದ್ದಾರೆ.


ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಅದಿತಿ ರಾವ್ ಹೈದರಿ ಕೂಡ ಒಬ್ಬರು. ಇವರು ಬಾಲಿವುಡ್ ಪ್ರವೇಶ ಮಾಡಿ 7 ವರ್ಷ ಕಳೆದಿದೆ. ಆದರೆ ಆರಂಭದ ದಿನಗಳಲ್ಲಿ ಅವರು ಕಾಸ್ಟಿಂಗ್ ಕೌಚ್ ನ್ನು ಎದುರಿಸಿದ್ದಾರಂತೆ. ಈ ವಿಚಾರವನ್ನು ಅದಿತಿ ರಾವ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


‘ನನ್ನ ಮುಂದೆಯೂ ಕೆಟ್ಟ ಬೇಡಿಕೆ ಇಡಲಾಗಿತ್ತು. ಆದ್ರೆ ನನ್ನನ್ನು ನಾನು ಸಂಭಾಳಿಸಿಕೊಂಡೆ. ಇದೇ ಕಾರಣಕ್ಕೆ ಕೆಲ ಪ್ರಾಜೆಕ್ಟ್ ಬಿಟ್ಟೆ. ಘಟನೆ ನಡೆದಾಗ ನಾನು ದಿಗ್ಬ್ರಮೆಗೊಂಡಿದ್ದೆ. ಜನರು ಹೇಗೆಲ್ಲ ವ್ಯವಹರಿಸಲು ಹೇಗೆ ಸಾಧ್ಯ ಎನ್ನಿಸಿತ್ತು. ಆ ದಿನ ಅಸಮಾಧಾನಗೊಂಡು ತುಂಬಾ ಅತ್ತಿದ್ದೇನೆ’ ಎಂದು ಅದಿತಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆಯ ಹಿರಿಯ ನಟಿ ಮಂಜುಳಮ್ಮ ಗೆ ವಂಚಿಸಿದ ಯುವ ನಿರ್ದೇಶಕ ನವೀನ್ ರೈ