Select Your Language

Notifications

webdunia
webdunia
webdunia
webdunia

ಈ ಕಾರಣಕ್ಕಾಗಿಯೇ ನಟಿ ಪ್ರಿಯಾಂಕಗೆ ಹಾಲಿವುಡ್ ಚಿತ್ರಗಳಲ್ಲಿ ಅವಕಾಶ ಸಿಕ್ಕಿಲ್ವಂತೆ

ಈ ಕಾರಣಕ್ಕಾಗಿಯೇ ನಟಿ ಪ್ರಿಯಾಂಕಗೆ  ಹಾಲಿವುಡ್ ಚಿತ್ರಗಳಲ್ಲಿ ಅವಕಾಶ ಸಿಕ್ಕಿಲ್ವಂತೆ
ಮುಂಬೈ , ಮಂಗಳವಾರ, 31 ಜುಲೈ 2018 (08:05 IST)
ಮುಂಬೈ : ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ ನಟಿ ಪ್ರಿಯಾಂಕ ಚೋಪ್ರಾ ಅವರು, ನಂತರ ಹಾಲಿವುಡ್ ನತ್ತ ಮುಖ ಮಾಡಿದರು. ಆದರೆ ಸ್ವಲ್ಪ ಸಮಯದ ನಂತರ ಹಾಲಿವುಡ್ ತೊರೆದು, ಮತ್ತೆ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ಪ್ರಿಯಾಂಕ ಈ ರೀತಿ ಯಾಕೆ ಮಾಡಿದರು ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಆದರೆ ಇದಕ್ಕೆ ಒಂದು ಬಲವಾದ ಕಾರಣವಿದೆಯಂತೆ. ಈ ವಿಚಾರವನ್ನು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 


ಹೌದು. ನಟಿ ಪ್ರಿಯಾಂಕ ಅಮೆರಿಕಾದ ಕ್ವಾಂಟಿಕೋ ಶೋ ಮೂಲಕ ಹಾಲಿವುಡ್​ನಲ್ಲಿ​ ನೆಲೆ ಕಂಡಿದ್ದರು. ಆದರೆ ಸತತ ಮೂರು ಸೀಸನ್​​ಗಳಲ್ಲಿ ಕಾಣಿಸಿಕೊಂಡ ಪ್ರಿಯಾಂಕ ನಂತರ ಆ ಶೋವನ್ನು ಬಿಟ್ಟು ಬಾಲಿವುಡ್​ಗೆ ವಾಪಸ್ ಆದರು. ಕಾರಣ ಪ್ರಿಯಾಂಕಾ ಅವರು ಟಿಆರ್​ಪಿ ತಂದು ಕೊಡುವಲ್ಲಿ ಯಶಸ್ವಿಯಾಗಿಲ್ವಂತೆ. ಆದಕಾರಣ ಕ್ವಾಂಟಿಕೋ 4 ನೇ ಸೀಸನ್​ ಕ್ಯಾನ್ಸಲ್​ ಆಗಿದೆಯಂತೆ.
 ಹಾಗೇ ಪ್ರಿಯಾಂಕ ಹಾಲಿವುಡ್​ ತೊರೆಯಲು ಮುಖ್ಯವಾದ ಕಾರಣವೆನೆಂದರೆ  ಅವರಿಗೆ ಹಾಲಿವುಡ್ ಚಿತ್ರಗಳಲ್ಲಿ ಅವಕಾಶ ಸಿಕ್ಕಿಲ್ವಂತೆ. ಇದಕ್ಕೆ ಕಾರಣ ಅವರ ಮೈ ಬಣ್ಣವಂತೆ.


ಪ್ರಿಯಾಂಕಾ ಅವರು ಚಿತ್ರದ ಸಲುವಾಗಿ ಸ್ಟುಡಿಯೋವೊಂದಕ್ಕೆ ತೆರಳಿದ್ದರಂತೆ. ಈ ವೇಳೆ ಇವರ ಮ್ಯಾನೇಜರ್​ ಅವರನ್ನು ಕರೆಯಿಸಿಕೊಂಡ ಚಿತ್ರತಂಡ, ನಮ್ಮ ಚಿತ್ರಕ್ಕೆ ಈ ನಟಿಯ ಮೈ ಬಣ್ಣ ಹೊಂದುವುದಿಲ್ಲ. ಅವರಿಗೆ ಚಿತ್ರದಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿದ್ದರಂತೆ. ಈ ವಿಷಯವನ್ನ ಮ್ಯಾನೇಜರ್​ ಬಳಿಯಿಂದ ಕೇಳಿದ ಪ್ರಿಯಾಂಕಾ ಅವರಿಗೆ ಸಿಕ್ಕಾಪಟ್ಟೆ ನಿರಾಸೆಯಾಗಿತ್ತಂತೆ. ಈ ಸಂಗತಿಯನ್ನು ಸ್ವತಃ ಪ್ರಿಯಾಂಕಾ ಸಂದರ್ಶನದಲ್ಲಿ  ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ವರಾಹಿ ವಿರುದ್ಧ ಶ್ರೀರೆಡ್ಡಿ ದೂರು ದಾಖಲಿಸಿದ್ದು ಯಾಕೆ?