Select Your Language

Notifications

webdunia
webdunia
webdunia
webdunia

ಕಿರುತೆರೆಯ ಹಿರಿಯ ನಟಿ ಮಂಜುಳಮ್ಮ ಗೆ ವಂಚಿಸಿದ ಯುವ ನಿರ್ದೇಶಕ ನವೀನ್ ರೈ

ಕಿರುತೆರೆಯ ಹಿರಿಯ ನಟಿ ಮಂಜುಳಮ್ಮ ಗೆ ವಂಚಿಸಿದ ಯುವ ನಿರ್ದೇಶಕ ನವೀನ್ ರೈ
ಬೆಂಗಳೂರು , ಮಂಗಳವಾರ, 31 ಜುಲೈ 2018 (15:38 IST)
ಬೆಂಗಳೂರು : ಸ್ಯಾಂಡಲ್ ವುಡ್ ಯುವ ನಿರ್ದೇಶಕನೊಬ್ಬ ತನಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು  ಕನ್ನಡ ಕಿರುತೆರೆಯ ಹಿರಿಯ ನಟಿಯೊಬ್ಬರು ನಿರ್ದೇಶಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ವಠಾರ, ಬದುಕು, ರಂಗೋಲಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಹಿರಿಯ ನಟಿ ಮಂಜುಳಮ್ಮ ಎಂಬುವವರಿಗೆ ಯುವ ನಿರ್ದೇಶಕ ನವೀನ್ ರೈ ಎಂಬಾತ ಕಿರು ಚಿತ್ರ ನಿರ್ಮಿಸುವ ಸಲುವಾಗಿ ಮಂಜುಳಮ್ಮರಿಂದ 15 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾನಂತೆ.


ಆದರೆ ಹಣಪಡೆದ ನಂತರ ನವೀನ್ ಸಂಪರ್ಕಕ್ಕೆ ಸಿಗದಿದ್ದಾಗ ಆತನನ್ನು ಹುಡುಕಿಕೊಂಡು ಹೋಗಿದ್ದ ಮಂಜುಳಮ್ಮ ಅವರಿಗೆ  , ಈ ವೇಳೆ ಆತ ಮನೆ ಖಾಲಿ ಮಾಡಿಕೊಂಡು ಊರು ಬಿಟ್ಟಿರುವ ವಿಚಾರ ತಿಳಿದಿದೆ.


ಇದೀಗ ಮಂಜುಳಮ್ಮ,  ನಿರ್ದೇಶಕ ನವೀನ್ ರೈ ತನ್ನಿಂದ 15 ಲಕ್ಷ ರೂ. ಸಾಲ ಪಡೆದು ಅದನ್ನು ವಾಪಸ್ ಮಾಡದೆ ಈಗ ಪರಾರಿಯಾಗಿದ್ದಾನೆ ಎಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಗೆ ಅಶ್ಲೀಲ ವಿಡಿಯೋ ತೋರಿಸಿ ಹಣ ಪೀಕಿದ ಆ ಸ್ಯಾಂಡಲ್ ವುಡ್ ನಟ ಯಾರು ಗೊತ್ತಾ?!