Publish Date: Mon, 30 Jul 2018 (12:15 IST)
Updated Date: Mon, 30 Jul 2018 (12:18 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ತನ್ನ ಎರಡೂ ಕೈಗಳನ್ನ ಕಳೆದುಕೊಂಡು ಕಷ್ಟದಲ್ಲಿರುವ ತಮ್ಮ ಅಭಿಮಾನಿಯೊಬ್ಬರಿಗೆ ಸಹಾಯಹಸ್ತ ನೀಡಿದ್ದಾರೆ.
ಹಾವೇರಿ ಮೂಲದ ಅಗಡಿ ಗ್ರಾಮದ 24 ವರ್ಷದ ಯುವಕ ಹರೀಶ್ ಅವರು ಯಶ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ತಳ್ಳುವ ಗಾಡಿಯಲ್ಲಿ ಊಟ ತಿಂಡಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದ. ತನ್ನ ಜೊತೆಗೆ ತನ್ನ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಈ ಹರೀಶ್ ಮಾರ್ಚ್ನಲ್ಲಿ ನಡೆದ ಊರ ಜಾತ್ರೆಯಲ್ಲಿ ಯಶ್ರ ಕಟೌಟ್ ಕಟ್ಟಲು ಹೋಗಿ, ಅಚಾನಕ್ಕಾಗಿ ತಗುಲಿದ ವಿದ್ಯುತ್ ಕಂಬಿಯಿಂದ ತನ್ನ ಎರಡೂ ಕೈಗಳನ್ನ ಕಳೆದುಕೊಂಡಿದ್ದಾನೆ. ಈ ವಿಷಯ ತಿಳಿದ ಯಶ್, ಆತನನ್ನ ಭೇಟಿ ಮಾಡಿದ್ದಾರೆ.
ಅಲ್ಲದೇ ನಟ ಯಶ್ ಅವರು ಕೇವಲ ಪರಿಹಾರ ಮೊತ್ತ ನೀಡಿ ಕೈ ತೊಳೆದುಕೊಳ್ಳದೇ ಆತನ ಇಡೀ ಜೀವನಕ್ಕೆ ಆಸರೆಯಾಗುವಂತಹ ನೆರವು ನೀಡಲು ಮುಂದಾಗಿದ್ದಾರೆ. ಯಶ್, ತಜ್ಞರ ಜೊತೆ ಮಾತನಾಡಿ, ಹರೀಶ್ಗೆ ಲೈಫ್ ಲಾಂಗ್ ಜೀವನ ಪೋಷಣೆಗೆ ಅಂತ ಕೆಲಸ ಮತ್ತು ಚಿಕಿತ್ಸೆ ನೀಡಿಸೋ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಇನ್ನು ಈ ರೀತಿ ಅಭಿಮಾನ ತೋರೋಕ್ಕೆ ಹೋಗಿ ಜೀವಕ್ಕೆ ಕುತ್ತು ತಂದುಕೋಬೇಡಿ ಎಂದು ಯಶ್ ಅಭಿಮಾನಿಗಳಿಗೆ ಕಿವಿಮಾತನ್ನು ಕೂಡ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ