Select Your Language

Notifications

webdunia
webdunia
webdunia
webdunia

‘ಭಾರತ್’ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಸ್ಥಾನಕ್ಕೆ ಕತ್ರಿನಾ ಕೈಫ್ ಆಯ್ಕೆ

‘ಭಾರತ್’ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಸ್ಥಾನಕ್ಕೆ  ಕತ್ರಿನಾ ಕೈಫ್ ಆಯ್ಕೆ
ಮುಂಬೈ , ಬುಧವಾರ, 1 ಆಗಸ್ಟ್ 2018 (06:37 IST)
ಮುಂಬೈ : ನಟ ಸಲ್ಮಾನ್ ಖಾನ್ ಅವರು ನಟಿಸುತ್ತಿರುವ ‘ಭಾರತ್’ ಚಿತ್ರದಿಂದ ನಟಿ ಪ್ರಿಯಾಂಕ ಚೋಪ್ರಾ ಅವರು ಹೊರಬಂದ ಮೇಲೆ ಇದೀಗ ಅವರ ಸ್ಥಾನಕ್ಕೆ ಸಲ್ಮಾನ್ ಖಾನ್ ಅವರ ಮಾಜಿ ಲವ್ವರ್ ನಟಿ ಕತ್ರಿನಾ ಕೈಫ್ ಆಯ್ಕೆಯಾಗಿದ್ದಾರಂತೆ.


‘ಭಾರತ್’ ಚಿತ್ರಕ್ಕೆ ಮೊದಲು ನಟಿ ಪ್ರಿಯಾಂಕ ಚೋಪ್ರಾ ಅವರು ಸಹಿ ಹಾಕಿದ್ದರು. ಆದರೆ ನಿಕ್ ಜೊತೆ ಮದುವೆಯಾಗುವ ಸಂಭ್ರಮದಲ್ಲಿರುವ ಕಾರಣ ಚಿತ್ರತಂಡದಿಂದ ಹೊರಗೆ ಬಂದಿದ್ದಾರೆ. ನಟಿ ಪ್ರಿಯಾಂಕ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆ ಹಲವರಲಿದ್ದು, ಇದೀಗ ಭಾರತ್ ಚಿತ್ರಕ್ಕೆ ಪ್ರಿಯಾಂಕ ಬದಲು ಕತ್ರಿನಾ ಕೈಫ್ ಸಹಿ ಹಾಕಿದ್ದಾರೆಂದು ನಿರ್ದೇಶಕ ಅಲಿ ಅಬ್ಬಾಸ್ ಟ್ವೀಟರ್ ಮೂಲಕ ತಿಳಿಸಿದ್ದಾರೆ.


‘ಈ ಹಿಂದೆ ಕೂಡ ಈ ಜೋಡಿ ಜೊತೆ ಕೆಲಸ ಮಾಡಿದ್ದೇನೆ. ಈಗ ಮತ್ತೆ ಭಾರತ್ ನಲ್ಲಿ ಒಂದಾಗಿ ಕೆಲಸ ಮಾಡಲಿದ್ದೇನೆ. ಸಲ್ಮಾನ್ -ಕತ್ರಿನಾ ಜೊತೆ ಕೆಲಸ ಮಾಡುವುದು ಖುಷಿ ವಿಚಾರ. ಅಲ್ಪಾವಧಿಯಲ್ಲಿ ಕತ್ರಿನಾರನ್ನು ಆಯ್ಕೆ ಮಾಡಲಾಗಿದೆ’ ಎಂದು ಅಲಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಅದಿತಿ ರಾವ್ ಈ ಹಿಂದೆ ಕೆಲ ಪ್ರಾಜೆಕ್ಟ್ ಗಳನ್ನು ಕೈಬಿಟ್ಟಿದ್ದು ಇದೇ ಕಾರಣಕ್ಕಾಗಿಯಂತೆ