Daily Horoscope

Select Your Language

Notifications

webdunia
webdunia
webdunia
webdunia

ಟ್ರೋಲ್ ಮಾಡಿದವರಿಗೆ ಸರಿಯಾಗಿ ಬೆಂಡೆತ್ತಿದ ನಟಿ ರಶ್ಮಿಕಾ ಮಂದಣ್ಣ

ಬೆಂಗಳೂರು
ಬೆಂಗಳೂರು : ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ‘ಗೀತ ಗೋವಿಂದಂ’ ತೆಲುಗು ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಅವರ ಜೊತೆ ನಾಯಕಿಯಾಗಿ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಈ ಚಿತ್ರದ ಪೋಸ್ಟರ್ ಒಂದರ ಕುರಿತು ಟ್ರೋಲ್ ಮಾಡಿದವರ ಮೇಲೆ ನಟಿ ರಶ್ಮಿಕಾ ಮಂದಣ್ಣ ಕೋಪಗೊಂಡಿದ್ದಾರೆ.


ರಶ್ಮಿಕಾ ಮಂದಣ್ಣ ನಟಿಸುತ್ತಿರುವ ತೆಲುಗು ಚಿತ್ರ ಗೀತಗೋವಿಂದಂ ಆಗಸ್ಟ್​​​ 15 ರಂದು ರಿಲೀಸ್ ಆಗಲಿದೆ. ಅದಕ್ಕಾಗಿ ನಾಯಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಆದಕಾರಣ  ನಟಿ ರಶ್ಮಿಕಾ  ಗೀತ ಗೋವಿಂದಂ ಸಿನಿಮಾದ ಪೋಸ್ಟರ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು.


ಈ ಪೋಸ್ಟರ್ ನಲ್ಲಿ ವಿಜಯ್ ಬೆನ್ನ ಮೇಲೆ ರಶ್ಮಿಕಾ ಕುಳಿತುಕೊಂಡಿದ್ದಾರೆ. ಈ ಫೋಟೋ ನೋಡಿದ ಕೆಲವರು ರಕ್ಷಿತ್ ಶೆಟ್ಟಿ ಈ ಫೋಟೋ ನೋಡಿ ಬೇಸರವಾಗಬೇಡಿ. ಇದೆಲ್ಲಾ ಫಿಲ್ಮ್ ಗಳಲ್ಲಿ ಸಹಜ ಎಂದು ಟ್ವಿಟ್ ಮಾಡಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ, ನಮ್ಮ ಜನರಿಗೆ ಹೆಣ್ಣು ಬೆಳೆಯುವುದನ್ನು ನೋಡಲು ಆಗದು. ನಟ ಮದುವೆ ಆದ ಮೇಲೂ ತೆರೆಯ ಮೇಲೆ ರೋಮ್ಯಾನ್ಸ್ ಮಾಡಿದರೆ ಇಷ್ಟ ಪಡುತ್ತಾರೆ. ಆದ್ರೆ, ಅದೇ ಹೆಣ್ಣು ಮದುವೆಯ ನಂತರ ಬಣ್ಣ ಹಚ್ಚಿದರೆ, ತಪ್ಪಾಗುತ್ತದೆ. ನಾನು ಟ್ರೋಲ್ ಮಾಡುವರಿಗೆ ಉತ್ತರ ಕೊಡಲು ಹೋಗಲಾರೆ ಎಂದು ಖಡಕ್ ಆಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾದಕ ನಟಿ ಬಿಪಾಶ ಬಸು ಇಂದಿಗೂ ತಮ್ಮ ಫಿಟ್ನೆಸ್ ನ್ನು ಹಾಗೇ ಉಳಿಸಿಕೊಂಡು ಬಂದಿದ್ದು ಹೇಗೆ ಗೊತ್ತಾ?