Select Your Language

Notifications

webdunia
webdunia
webdunia
webdunia

ಮಾನವೀಯತೆ ಮೆರೆದ ಕುರಿಗಾಹಿಗಳು

ಮಾನವೀಯತೆ ಮೆರೆದ ಕುರಿಗಾಹಿಗಳು
ದಾವಣಗೆರೆ , ಶುಕ್ರವಾರ, 3 ಆಗಸ್ಟ್ 2018 (16:29 IST)
ಆ ವೃದ್ಧ ಊಟವಿಲ್ಲದೆ ನಿತ್ರಾಣಗೊಂಡಿದ್ದ. ಆದರೆ ಅಪರಿಚಿತ ವ್ಯಕ್ತಿಯ ಪಾಲಿಗೆ ಕುರಿಗಾಹಿಗಳು ನೆರವಿಗೆ ಬಂದರು. ಕೇವಲ ಊಟವನ್ನು ನೀಡಿದ್ದಷ್ಟೇ ಮರುಜನ್ಮ ನೀಡಿ ಮಾನವೀಯತೆ ಮೆರೆದರು. ಅಷ್ಟಕ್ಕೂ ಆ ಕುರಿಗಾಹಿಗಳು ಮಾಡಿದ ಮಾದರಿ ಕೆಲಸ ಏನು ಗೊತ್ತಾ?

 
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ದೇವರಬೆಳಕೆರೆಯ ಪಕ್ಕದಲ್ಲಿ ಮೂರು ದಿನದಿಂದ ಊಟವಿಲ್ಲದೆ ಅಪರಿಚಿತ ನಿತ್ರಾಣಗೊಂಡಿದ್ದ. ಹಳ್ಳದ ಪಕ್ಕ ಕುರಿ ಮೇಯಿಸುತ್ತಿದ್ದ ಕುರಿಗಾಯಿಗಳು ಇತನ ಸ್ಥಿತಿ ನೋಡಿ ಊಟ ನೀಡಿದರು. ಅಷ್ಟೇ ಅಲ್ಲ ಅಂಬ್ಯೂಲೆನ್ಸ್ ನಲ್ಲಿ ಆಸ್ಪತ್ರೆ ಗೆ ಸಾಗಿ ಮರು ಜನ್ಮನೀಡಿದ್ದಾರೆ.

ಸದ್ಯ ಅಪರಿಚಿತ ವ್ಯಕ್ತಿ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದುಕೊಳ್ಳತ್ತಿದ್ದಾನೆ. ಕುರಿಗಾಹಿಗಳ ನಡೆ ಮಾದರಿಯಾಗಿದ್ದು ಮಾತ್ರವಲ್ಲ, ಜನಮೆಚ್ಚುಗೆಗೂ ಪಾತ್ರವಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ತಹಸೀಲ್ದಾರ್ ಅಪಹರಣ ಶಂಕೆ..!