Publish Date: Sun, 05 Aug 2018 (09:06 IST)
Updated Date: Sun, 05 Aug 2018 (09:08 IST)
ಎಡ್ಜ್ ಬಾಸ್ಟನ್: ಕೆಎಲ್ ರಾಹುಲ್ ಗೆ ಟೀಂ ಇಂಡಿಯಾ ಆಡುವ ಬಳಗದಲ್ಲಿ ಸ್ಥಾನ ಸಿಕ್ಕ ಮೇಲೂ ತಕ್ಕ ಪ್ರದರ್ಶನ ಕೊಡಲು ವಿಫಲರಾಗಿದ್ದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ಬದಲು ಈ ಪಂದ್ಯದಲ್ಲಿ ಅವಕಾಶ ಪಡೆದ ರಾಹುಲ್ ಎರಡೂ ಇನಿಂಗ್ಸ್ ಗಳಲ್ಲಿ ವಿಫಲರಾಗಿದ್ದರು. ದ್ವಿತೀಯ ಇನಿಂಗ್ಸ್ ನಲ್ಲಿ ಕೊಂಚ ಭರವಸೆ ಮೂಡಿಸಿದರಾದರೂ 13 ರನ್ ಗೆ ವಿಕೆಟ್ ಒಪ್ಪಿಸಿದರು.
ಇದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಳಪೆ ಶಾಟ್ ಸೆಲೆಕ್ಷನ್ ನಿಂದ ಔಟಾಗುತ್ತಿರುವ ರಾಹುಲ್ ಬದಲು ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದಂತೆ ನಿಧಾನಗತಿಯಲ್ಲಿ ಆಡುವ ಪೂಜಾರ ಆಡಿಸಿದ್ದರೆ, ಟೀಂ ಇಂಡಿಯಾಕ್ಕೆ ಇಷ್ಟೊಂದು ಸಂಕಷ್ಟ ಬರುತ್ತಿರಲಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ.
ಒತ್ತಡದಲ್ಲಿರುವಾಗಲೂ ಯೋಚನೆ ಮಾಡಿ ಆಡುವ ಬದಲು ಐಪಿಎಲ್ ನಲ್ಲಿ ಆಡುವಂತೆ ಆಫ್ ಸ್ಟಂಪ್ ನಾಚೆ ಹೋಗುತ್ತಿದ್ದ ಚೆಂಡನ್ನು ಕೆಣಕುವ ಪ್ರಯತ್ನ ಮಾಡಿದ್ದೇಕೆ ಎಂದು ರಾಹುಲ್ ಮೇಲೆ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.