Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ಕನಸು ಕಾಣುತ್ತಾ ಮಲಗುತ್ತಾರಂತೆ ಇಂಗ್ಲೆಂಡ್ ವೇಗಿ!

ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ಕನಸು ಕಾಣುತ್ತಾ ಮಲಗುತ್ತಾರಂತೆ ಇಂಗ್ಲೆಂಡ್ ವೇಗಿ!
ಎಡ್ಜ್ ಬಾಸ್ಟನ್ , ಶನಿವಾರ, 4 ಆಗಸ್ಟ್ 2018 (09:39 IST)
ಎಡ್ಜ್ ಬಾಸ್ಟನ್: ವಿರಾಟ್ ಕೊಹ್ಲಿಯನ್ನು ಔಟ್ ಮಾಡಿ, ಮ್ಯಾಚ್ ಗೆಲ್ಲಿ! ಇದು ಇಂಗ್ಲೆಂಡ್ ನ ಆಟಗಾರರ ಸದ್ಯದ ಮಂತ್ರ.
 

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಇಂದು ಅಂತ್ಯಗೊಳ್ಳಲಿದೆ. ಗೆಲುವಿಗೆ 194 ರನ್ ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ 110 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ.

ಎಲ್ಲಕ್ಕಿಂತ ಹೆಚ್ಚು ಮೊದಲ ಇನಿಂಗ್ಸ್ ನಲ್ಲಿ ಭಾರತ ತಂಡಕ್ಕೆ ಗೋಡೆಯಂತೆ ನಿಂತಿದ್ದ ವಿರಾಟ್ ಕೊಹ್ಲಿ ಈ ಇನಿಂಗ್ಸ್ ನಲ್ಲೂ ಸೋಲು-ಗೆಲುವಿನ ನಡುವೆ ಗೆರೆಯಾಗಿ ನಿಂತಿದ್ದಾರೆ. ಈಗಾಗಲೇ 43 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಬೇರೆಲ್ಲಾ ಬ್ಯಾಟ್ಸ್ ಮನ್ ಗಳನ್ನೂ ಸುಲಭವಾಗಿ ಪೆವಿಲಿಯನ್ ಗೆ ಕಳುಹಿಸುತ್ತಿರುವ ಆಂಗ್ಲರಿಗೆ ಕೊಹ್ಲಿಯೇ ಕಬ್ಬಿಣದ ಕಡಲೆಯಾಗುತ್ತಿದ್ದಾರೆ. ಹೀಗಾಗಿ ಕೊಹ್ಲಿಯನ್ನು ಔಟ್ ಮಾಡಿದರೆ ಭಾರತ ದಿಂಡುರುಳುವುದು ಗ್ಯಾರಂಟಿ ಎಂದು ಎದುರಾಳಿಗಳಿಗೂ ಗೊತ್ತು.

ಹೀಗಾಗಿಯೇ ನಿನ್ನೆಯ ದಿನದಾಟ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ಕನಸು ಕಾಣುತ್ತಲೇ ಇಂದು ನಿದ್ರಿಸುತ್ತೇವೆ ಎಂದಿದ್ದಾರೆ. ಆದರೆ ಅವರ ಕನಸು ಕನಸಾಗಿಯೇ ಇರಲಿ ಎಂದು ಟೀಂ ಇಂಡಿಯಾ ಅಭಿಮಾನಿಗಳು ಆಶಿಸುತ್ತಿದ್ದಾರೆ. ಒಟ್ಟಾರೆ ಇಂದಿನ ದಿನದಾಟದಲ್ಲಿ ಥ್ರಿಲ್ಲಿಂಗ್ ಇರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಸಾನಿಯಾ ಮಿರ್ಜಾ ವೈಯಕ್ತಿಕ ಜೀವನದ ರಹಸ್ಯಗಳು ಕೆಲವೇ ತಿಂಗಳುಗಳಲ್ಲಿ ಬಯಲಾಗಲಿದೆ!