Publish Date: Sat, 04 Aug 2018 (09:24 IST)
Updated Date: Sat, 04 Aug 2018 (09:26 IST)
ಹೈದರಾಬಾದ್: ಮೂಗುತಿ ಸುಂದರಿ, ಟೆನಿಸ್ ಜಗತ್ತಿನಲ್ಲಿ ಭಾರತಕ್ಕೆ ವಿಶೇಷ ಹೆಸರು ತಂದುಕೊಟ್ಟ ಸಾನಿಯಾ ಮಿರ್ಜಾ ವೈಯಕ್ತಿಕ ಬದುಕೂ ಅಷ್ಟೇ ವರ್ಣರಂಜಿತ.
ಅವರ ಟೆನಿಸ್, ವೈಯಕ್ತಿಕ ಬದುಕಿನ ಕುರಿತಾದ ಸಿನಿಮಾವೊಂದು ಶೀಘ್ರ ಸೆಟ್ಟೇರಲಿದೆ. ಕ್ರಿಕೆಟಿಗ ಧೋನಿ, ಅಥ್ಲೆಟ್ ಮಿಲ್ಕಾ ಸಿಂಗ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಂತರ ಇದೀಗ ಸಾನಿಯಾ ಮಿರ್ಜಾರ ಆತ್ಮಚರಿತ್ರೆಯೂ ಸಿನಿಮಾವಾಗಲಿದೆ.
ಬಾಲಿವುಡ್ ಸಿನಿಮಾ ನಿರ್ಮಾಪಕ ರೋನೀ ಸ್ಕ್ರೂವಾಲಾ ಈಗಾಗಲೇ ಸಾನಿಯಾ ಕುರಿತಾದ ಸಿನಿಮಾ ಮಾಡಲು ಹಕ್ಕು ಖರೀದಿಸಿದ್ದಾರೆ. ಸದ್ಯಕ್ಕೆ ಗರ್ಭಿಣಿಯಾಗಿರುವ ಸಾನಿಯಾ ಟೆನಿಸ್ ಅಂಕಣದಿಂದ ದೂರವಿದ್ದಾರೆ. ಈ ಸಿನಿಮಾದಲ್ಲಿ ಸಾನಿಯಾರ ಟೆನಿಸ್ ವೃತ್ತಿ ಬದುಕಿನ ಜತೆಗೆ ಅವರ ಪಾಕಿಸ್ತಾನ ಪತಿ ಶೊಯೇಬ್ ಮಲಿಕ್ ಜತೆಗಿನ ಪ್ರೇಮ ಸಂಬಂಧ ಇತ್ಯಾದಿ ವೈಯಕ್ತಿಕ ಬದುಕಿನ ವಿವರಣೆಯೂ ಇರಲಿದೆಯಂತೆ. ಹಾಗಾಗಿ ಸಾನಿಯಾರ ವೈಯಕ್ತಿಕ ಬದುಕಿನ ಬಗ್ಗೆಯೂ ತಿಳಿಯುವ ಕುತೂಹಲವಿದ್ದರೆ ಈ ಸಿನಿಮಾ ನೋಡಬಹುದು. ತಾರಾಗಣ, ತಂತ್ರಜ್ಞರ ಆಯ್ಕೆ ಇನ್ನೂ ನಡೆಯಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.