Select Your Language

Notifications

webdunia
webdunia
webdunia
webdunia

ಇಮ್ರಾನ್ ಖಾನ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಬಾಲಿವುಡ್ ನ ಈ ನಟನನ್ನು ಆಹ್ವಾನಿಸಿದ್ದಾರಂತೆ

ಇಮ್ರಾನ್ ಖಾನ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಬಾಲಿವುಡ್ ನ ಈ ನಟನನ್ನು ಆಹ್ವಾನಿಸಿದ್ದಾರಂತೆ
ಇಸ್ಲಾಮಾಬಾದ್ , ಗುರುವಾರ, 2 ಆಗಸ್ಟ್ 2018 (11:51 IST)
ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ತಮ್ಮ  ಪ್ರಮಾಣವಚನ ಸಮಾರಂಭಕ್ಕೆ ಭಾರತದ ಕ್ರಿಕೆಟರ್ ಗಳ ಜೊತೆಗೆ ಬಾಲಿವುಡ್ ನಟರೊಬ್ಬರಿಗೂ ಆಹ್ವಾನ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಹೌದು. ಆಗಸ್ಟ್ 11ರಂದು ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಈ ಸಮಾರಂಭಕ್ಕೆ ಭಾರತದ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿತ್ತು. ಅದರ ಜೊತೆಗೆ ಭಾರತದ ಮಾಜಿ ಕ್ರಿಕೆಟರ್‌ಗಳಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್  ಮತ್ತು ನವಜೋತ್ ಸಿಂಗ್ ಸಿಧು ಹಾಗೂ ಇವರ ಜೊತೆಗೆ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಕೂಡ ಆಹ್ವಾನಿಸಲಾಗಿದೆ ಎನ್ನಲಾಗಿದೆ.


ಜುಲೈ 25ರಂದು ನಡೆದಿದ್ದ ಚುನಾವಣೆಯಲ್ಲಿ ಖಾನ್ ಅವರ ಪಿಟಿಐ ಪಕ್ಷವು 115 ಸೀಟುಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 172. ಈಗಾಗಲೇ 117 ಸ್ಥಾನಗಳಲ್ಲಿ ಜಯಗಳಿಸಿರುವ ಇಮ್ರಾನ್ ಖಾನ್ ಅವರ ಪಿಟಿಐ ಉಳಿದ ಪಕ್ಷಗಳ ಬೆಂಬಲದಿಂದ ಸರ್ಕಾರ ರಚಿಸಲು ಮುಂದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪೇಟಿಎಂಗೆ ಆರ್.ಬಿ.ಐ ನೀಡಿದ ಸೂಚನೆ ಏನು ಗೊತ್ತಾ?