Select Your Language

Notifications

webdunia
webdunia
webdunia
webdunia

ಪತಿ ಶೊಯೇಬ್ ಮಲಿಕ್ ಗಿರುವ ಒಂದೇ ಒಂದು ಒಳ್ಳೆ ಗುಣ ಹೇಳಿ ಎಂದರೆ ಸಾನಿಯಾ ಮಿರ್ಜಾ ಹೇಳಿದ್ದೇನು ಗೊತ್ತಾ?

ಸಾನಿಯಾ ಮಿರ್ಜಾ
ಹೈದರಾಬಾದ್: ಸದ್ಯದಲ್ಲೇ ಅಮ್ಮನಾಗಲಿರುವ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಭಿಮಾನಿಗಳ ಪ್ರಶ್ನೆಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಉತ್ತರಿಸಿದ್ದಾರೆ.

ಗರ್ಭಿಣಿಯಾಗಿರುವುದರಿಂದ ಟೆನಿಸ್ ಅಂಕಣದಿಂದ ದೂರವಿರುವ ಸಾನಿಯಾ ತಮ್ಮ ಬಿಡುವಿನ ವೇಳೆಯಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಪ್ರೆಗ್ನೆನ್ಸಿ ಟಿಪ್ಸ್ ಕೂಡಾ ಕೊಟ್ಟಿದ್ದಾರೆ.

ಇದೇ ವೇಳೆ ಅಭಿಮಾನಿಯೊಬ್ಬರು ಪತಿ ಶೊಯೇಬ್ ಮಲಿಕ್ ಗಿರುವ ಒಂದೇ ಒಂದು ಒಳ್ಳೆಯ ಗುಣದ ಬಗ್ಗೆ ಹೇಳಿ ಎಂದಾಗ ಸಾನಿಯಾ ಅವರಿಗೆ ತಾಳ್ಮೆ ಜಾಸ್ತಿ ಎಂದಿದ್ದಾರೆ. ಅಷ್ಟೇ ಅಲ್ಲ, ಶೊಯೇಬ್ ಸಾನಿಯಾ ಏಕಾಂಗಿಯಾಗಿರುವ ಫೋಟೋ ಯಾಕೆ ಪ್ರಕಟಿಸಲ್ಲ ಎಂದು ಕೇಳಿದ್ದಕ್ಕೆ, ನನಗೆ ಕೆಟ್ಟ ದೃಷ್ಟಿ ಎನ್ನುವುದನ್ನು ನಂಬುವ ಅಭ್ಯಾಸವಿದೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ಎಲ್ಲಾ ನೂತನ ತಾಯಂದಿರಿಗೂ ಸದಾ ಕ್ರಿಯಾಶೀಲರಾಗಿರುವಂತೆ ಸಲಹೆಯನ್ನೂ ಈ ವೇಳೆ ಸಾನಿಯಾ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ರವಿಚಂದ್ರನ್ ಅಶ್ವಿನ್ ರಿಂದಾಗಿ ಇಂಗ್ಲೆಂಡ್ ನ ಈ ಕ್ರಿಕೆಟಿಗನ ವೃತ್ತಿ ಬದುಕೇ ಕೊನೆಯಾಗುತ್ತಾ?!