Select Your Language

Notifications

webdunia
webdunia
webdunia
webdunia

ತೀವ್ರ ಚರ್ಚೆಗೆ ಕಾರಣವಾದ ವಿರಾಟ್ ಕೊಹ್ಲಿ ನಿರ್ಧಾರ

ತೀವ್ರ ಚರ್ಚೆಗೆ ಕಾರಣವಾದ ವಿರಾಟ್ ಕೊಹ್ಲಿ ನಿರ್ಧಾರ
ಎಡ್ಜ್ ಬಾಸ್ಟನ್ , ಗುರುವಾರ, 2 ಆಗಸ್ಟ್ 2018 (09:20 IST)
ಎಡ್ಜ್ ಬಾಸ್ಟನ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರರನ್ನೇ ಹೊರಗಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರ್ಧಾರ ತೀವ್ರ ಚರ್ಚೆಗೊಳಗಾಗಿದೆ.

ಮೂರನೇ ಕ್ರಮಾಂಕದಲ್ಲಿ ಅದ್ಭುತವಾಗಿ ಆಡುವ ಪೂಜಾರ ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರ. ತುಂಬಾ ತಾಳ್ಮೆಯಿರುವ ಈ ಆಟಗಾರ ತುಂಬಾ ಹೊತ್ತು ಕ್ರೀಸ್ ‍ನಲ್ಲಿದ್ದು ಬೌಲರ್ ಗಳನ್ನು ಸತಾಯಿಸುತ್ತಾರೆ.

ಆದರೆ ತಮ್ಮ ನೆಚ್ಚಿನ ಶಿಖರ್ ಧವನ್ ಗೆ ಸ್ಥಾನ ಕೊಡಿಸಲು ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಗೆ ಮೂರನೇ ಕ್ರಮಾಂಕ ನೀಡಿ ಪೂಜಾರರನ್ನು ತಂಡದಿಂದ ಹೊರಗಿಟ್ಟಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಫಾರ್ಮ್ ನಲ್ಲಿಲ್ಲದ ಧವನ್ ಗಾಗಿ ಟೆಸ್ಟ್ ಗೆ ಹೇಳಿ ಮಾಡಿಸಿದ ಪೂಜಾರರನ್ನು ಹೊರಗಿಟ್ಟಿದ್ದು ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲೂ ತೀವ್ರ ಚರ್ಚೆಗೆ ಗುರಿಯಾಗಿದೆ. ಇದರ ಜತೆಗೆ ಏಕೈಕ ಸ್ಪಿನ್ನರ್ ನೊಂದಿಗೆ ಕಣಕ್ಕಿಳಿದ ಕೊಹ್ಲಿ ನಿರ್ಧಾರವನ್ನೂ ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಅವರ ಟೀಕೆಗೆ ತಕ್ಕಂತೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದುವರೆಗೆ ಇಂಗ್ಲೆಂಡ್ ನ ನಾಲ್ಕು ವಿಕೆಟ್ ಕಿತ್ತು ಗಾಯದ ಮೇಲೆ ತುಪ್ಪ ಸುರಿದಿದ್ದಾರೆ.

ವೇಗಿಗಳಿಗಿಂತ ಸ್ಪಿನ್ನರ್ ಗಳೇ ಮೇಲುಗೈ ಸಾಧಿಸುತ್ತಿರುವಾಗ  ಮೂವರು ಸ್ಪೆಷಲಿಸ್ಟ್ ವೇಗಿಗಳ ಬದಲು ಇಬ್ಬರು ಸ್ಪಿನ್ನರ್ ಗಳನ್ನು ಆಡಿಸಿದ್ದರೆ ಭಾರತಕ್ಕೆ ಮೇಲುಗೈ ಸಾಧಿಸಲು ಇನ್ನೂ ಅವಕಾಶವಿತ್ತು ಎಂದು ಅಭಿಮಾನಿಗಳು ವಾಗ್ದಾಳಿ ನಡೆಸುತ್ತಿದ್ದಾರೆ. ಕೊಹ್ಲಿಯ ಈ ನಿರ್ಧಾರ ಎಷ್ಟು ಸರಿ ಎಂಬುದು ಭಾರತದ ಬ್ಯಾಟಿಂಗ್ ಸಂದರ್ಭ ಗೊತ್ತಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ತನ್ನೆದುರು ಬ್ಯಾಟ್ ಬಿಸಾಕಿ ಸೆಲೆಬ್ರೇಟ್ ಮಾಡಿದ್ದ ಜೋ ರೂಟ್ ಗೆ ಕೊನೆಗೂ ತಿರುಗೇಟು ಕೊಟ್ಟ ವಿರಾಟ್ ಕೊಹ್ಲಿ!