Publish Date: Thu, 02 Aug 2018 (09:15 IST)
Updated Date: Thu, 02 Aug 2018 (09:16 IST)
ಎಡ್ಜ್ ಬಾಸ್ಟನ್: ವಿರಾಟ್ ಕೊಹ್ಲಿ ಮೈದಾನದಲ್ಲಿ ಎದುರಾಳಿಗಳು ಕೊಡುವ ಟಾಂಗ್ ಗೆ ಎದಿರೇಟು ಕೊಡದೇ ಬಿಡುವವರಲ್ಲ. ಇದೀಗ ಇಂಗ್ಲೆಂಡ್ ನಾಯಕ ಜೋ ರೂಟ್ ಗೂ ಅದೇ ರುಚಿ ತೋರಿಸಿದ್ದಾರೆ ಕ್ಯಾಪ್ಟನ್ ಕೊಹ್ಲಿ.
ಏಕದಿನ ಸರಣಿ ಗೆದ್ದಾಗ ಜೋ ರೂಟ್ ಬೇಕೆಂದೇ ವಿರಾಟ್ ಕೊಹ್ಲಿ ಎದುರು ತಮ್ಮ ಬ್ಯಾಟ್ ಬಿಸಾಕಿ ಸಂಭ್ರಮಾಚರಣೆ ಮಾಡಿದ್ದರು. ರೂಟ್ ಅವರ ಈ ವ್ಯಂಗ್ಯ ಸಂಭ್ರಮಾಚರಣೆಗೆ ಕೊಹ್ಲಿ ತಿರುಗೇಟು ಕೊಡುತ್ತಾರೆಂದೇ ನಿರೀಕ್ಷಿಸಲಾಗಿತ್ತು.
ಅಭಿಮಾನಿಗಳ ಲೆಕ್ಕಾಚಾರ ಹುಸಿಯಾಗಲಿಲ್ಲ. ಅದಕ್ಕೆ ತಕ್ಕ ಸಮಯವೂ ನಿನ್ನೆ ಮೊದಲ ಟೆಸ್ಟ್ ನ ಮೊದಲ ದಿನವೇ ಕೊಹ್ಲಿಗೆ ಎದುರಾಯಿತು. ನಿನ್ನೆ ಜೋ ರೂಟ್ ರನ್ನು ರನೌಟ್ ಮಾಡಿದ ವಿರಾಟ್ ಕೊಹ್ಲಿ ಮೈಕ್ ಡ್ರಾಪ್ ಮಾಡಿ ರೂಟ್ ಗೆ ತೋರಿಸುವ ಮೂಲಕ ಅಂದು ತಮಗೆ ಬ್ಯಾಟ್ ಬಿಸಾಕಿ ವ್ಯಂಗ್ಯ ಮಾಡಿದ್ದಕ್ಕೆ ತಿರುಗೇಟು ಕೊಟ್ಟರು. ಅಂತೂ ವಿರಾಟ್ ಕೊಹ್ಲಿ ತಮ್ಮ ಟಿಕ್ ಫಾರ್ ಟೇಕ್ ಪಾಲಿಸಿಯನ್ನು ಮರೆಯಲಿಲ್ಲ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.