Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಕುಣಿಕೆ ಹಾಕಲು ಇಂಗ್ಲೆಂಡ್ ಬೌಲರ್ ಗಳು ಯೋಜನೆ ಸಿದ್ಧವಾಗಿದೆಯಂತೆ!

ವಿರಾಟ್ ಕೊಹ್ಲಿಗೆ ಕುಣಿಕೆ ಹಾಕಲು ಇಂಗ್ಲೆಂಡ್ ಬೌಲರ್ ಗಳು ಯೋಜನೆ ಸಿದ್ಧವಾಗಿದೆಯಂತೆ!
ಲಂಡನ್ , ಬುಧವಾರ, 1 ಆಗಸ್ಟ್ 2018 (09:16 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ ಇದೀಗ ಎದುರಾಳಿಗಳ ಮುಖ್ಯ ಟಾರ್ಗೆಟ್ ಆಗಿದ್ದಾರೆ.

ವಿರಾಟ್ ಸಿಡಿದರೆ ಟೀಂ ಇಂಡಿಯಾದ ಅರ್ಧ ಕೆಲಸ ಮುಗಿದಂತೇ ಎನ್ನುವುದು ಎದುರಾಳಿಗಳಿಗೆ ಗೊತ್ತು. ಇದೇ ಕಾರಣಕ್ಕೆ ವಿರಾಟ್ ರನ್ನು ಎರಡೂ ತುದಿಯಿಂದ ಕಟ್ಟಿಹಾಕಲು ಇಂಗ್ಲಿಷ್ ಬೌಲರ್ ಗಳು ಯೋಜನೆ ಸಿದ್ಧಪಡಿಸಿದ್ದಾರಂತೆ. ಹಾಗಂತ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಹೇಳಿಕೊಂಡಿದ್ದಾರೆ.

‘ಇದು ಕೇವಲ ಜಿಮ್ಮಿ ಆಂಡರ್ಸನ್ ಮತ್ತು ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ಒಬ್ಬರ ನಡುವಿನ ಹೋರಾಟವಲ್ಲ. ಒಂದು ವೇಳೆ ವಿರಾಟ್ ಆಂಡರ್ಸನ್‍ ರನ್ನು ಎಚ್ಚರಿಕೆಯಿಂದ ಎದುರಿಸಿ, ನಮ್ಮ ಬೌಲಿಂಗ್ ನಲ್ಲಿ ರನ್ ಗಳಿಸಿದರೆ ಏನು ಪ್ರಯೋಜನ? ಅದಕ್ಕೆ ಎರಡೂ ತುದಿಯಿಂದ ವಿರಾಟ್ ಗೆ ಒತ್ತಡ ಹಾಕುವಂತಹ ಯೋಜನೆ ಸಿದ್ಧಪಡಿಸಿದ್ದೇವೆ’ ಎಂದು ಬ್ರಾಡ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಐತಿಹಾಸಿಕ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿಗೆ ದಾಖಲೆ ಬರೆಯುವ ಅವಕಾಶ