Select Your Language

Notifications

webdunia
webdunia
webdunia
webdunia

ಆಂಡರ್ಸನ್-ವಿರಾಟ್ ಕೊಹ್ಲಿ ಕದನಕ್ಕೆ ಸಿದ್ಧವಾಯಿತು ವೇದಿಕೆ!

ಆಂಡರ್ಸನ್-ವಿರಾಟ್ ಕೊಹ್ಲಿ ಕದನಕ್ಕೆ ಸಿದ್ಧವಾಯಿತು ವೇದಿಕೆ!
ಲಂಡನ್ , ಮಂಗಳವಾರ, 31 ಜುಲೈ 2018 (09:40 IST)
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ನಡುವಿನ ಕದನ ಕುತೂಹಲಕ್ಕೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇದಿಕೆ ಸಜ್ಜಾಗಿದೆ.

ಇವರಿಬ್ಬರ ನಡುವೆ ಮೈದಾನದ ಹಗ್ಗ ಜಗ್ಗಾಟ ಎಲ್ಲರಿಗೂ ಗೊತ್ತೇ ಇದೆ. ಕಳೆದ ಬಾರಿ ಟೀಂ ಇಂಡಿಯಾ ಧೋನಿ ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಬ್ಯಾಟ್ಸ್ ಮನ್ ಆಗಿ ವಿರಾಟ್ ಕೊಹ್ಲಿ ಆಂಡರ್ಸನ್ ಎದುರು ಪರದಾಡಿದ್ದರು.

ಇದನ್ನೇ ನೆಪವಾಗಿಟ್ಟುಕೊಂಡು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಆಂಡರ್ಸನ್, ನಮ್ಮಲ್ಲಿ ಬಂದಾಗ ನೀವು ರನ್ ಗಳಿಸಲು ಸಾಧ್ಯವಾದರೆ ಆಗ ನಿಮ್ಮನ್ನು ಮೆಚ್ಚಿಕೊಳ್ಳುತ್ತೇನೆ ಎಂದು ಕೊಹ್ಲಿಗೆ ಸವಾಲು ಹಾಕಿದ್ದರು.

ಅಂದಿನ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸಕ್ಕೆ ಹೋಲಿಸಿದರೆ ಒಬ್ಬ ಬ್ಯಾಟ್ಸ್‍ ಮನ್ ಆಗಿ ಕೊಹ್ಲಿ ಈಗ ಸಾಕಷ್ಟು ಪಳಗಿದ್ದಾರೆ. ಇತ್ತ ಆಂಡರ್ಸನ್ ಕೂಡಾ ಈಗಷ್ಟೇ ಗಾಯದಿಂದ ಚೇತರಿಸಿಕೊಂಡು ಫಿಟ್ ಆಗಿ ಟೆಸ್ಟ್ ಸರಣಿಗೆ ಮೈದಾನಕ್ಕಿಳಿಯುತ್ತಿದ್ದಾರೆ. ಹೀಗಾಗಿ ಈ ಎರಡು ವಿಶ್ವ ಶ್ರೇಷ್ಠ ಆಟಗಾರರ ನಡುವಿನ ಕಾದಾಟ ಹೇಗಿರಬಹುದು ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಟಿಷರನ್ನು ಎದುರಿಸಲು ಸಿದ್ಧರಾಗಿದ್ದಾರಂತೆ ವಿರಾಟ್ ಕೊಹ್ಲಿ