Publish Date: Tue, 31 Jul 2018 (09:23 IST)
Updated Date: Tue, 31 Jul 2018 (09:24 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಆರಂಭಿಕ ಸ್ಥಾನ ಸಿಗುತ್ತಾ? ಈ ಬಗ್ಗೆ ಕೋಚ್ ರವಿಶಾಸ್ತ್ರಿ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ.
ಇಂಗ್ಲೆಂಡ್ ನಲ್ಲಿ ಶಿಖರ್ ಧವನ್ ಆರಂಭಿಕರಾಗಿ ಇದುವರೆಗೆ ಕಣಕ್ಕಿಳಿದಿದ್ದರೂ ಅವರಿಂದ ಉತ್ತಮ ರನ್ ಬಂದಿಲ್ಲ. ಆದರೆ ಕೆಎಲ್ ರಾಹುಲ್ ಎಲ್ಲಾ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದಾರೆ.
ಹೀಗಾಗಿ ಟೆಸ್ಟ್ ಸರಣಿಯಲ್ಲಿ ಮುರಳಿ ವಿಜಯ್ ಜತೆಗೆ ಧವನ್ ಬದಲು ರಾಹುಲ್ ಆರಂಭಿಕರಾಗಿ ತಮ್ಮ ಮೆಚ್ಚಿನ ಸ್ಥಾನ ಪಡೆಯುತ್ತಾರಾ ಎಂಬ ಪ್ರಶ್ನೆಗೆ ಕೋಚ್ ರವಿಶಾಸ್ತ್ರಿ ಉತ್ತರಿಸಿದ್ದಾರೆ. ‘ಕೆಎಲ್ ಯಾವುದೇ ಬ್ಯಾಟಿಂಗ್ ಕ್ರಮಾಂಕ ಕೊಟ್ಟರೂ ಹೊಂದಿಕೊಳ್ಳಬಲ್ಲ ಅದ್ಭುತ ಆಟಗಾರ. ಅವರು ತಂಡದಲ್ಲಿ ಮೂರನೇ ಆರಂಭಿಕನಾಗಿ ಆಯ್ಕೆಯಾಗುತ್ತಾರೆ. ಅಗ್ರ ನಾಲ್ಕು ಕ್ರಮಾಂಕದಲ್ಲಿ ಯಾವುದಾದರೊಂದು ಸ್ಥಾನದಲ್ಲಿ ಅವರು ಆಡಿಯೇ ಆಡುತ್ತಾರೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಆ ಮೂಲಕ ಮತ್ತೆ ರಾಹುಲ್ ಗೆ ಆರಂಭಿಕ ಸ್ಥಾನ ಗ್ಯಾರಂಟಿಯಲ್ಲ ಎಂಬ ಸುಳಿವು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.