Publish Date: Sun, 29 Jul 2018 (09:18 IST)
Updated Date: Sun, 29 Jul 2018 (09:20 IST)
ರಾಂಚಿ: ಟೀಂ ಇಂಡಿಯಾ ಕ್ರಿಕೆಟ್ ನಿಂದ ಬಿಡುವು ಪಡೆದಿರುವ ಕ್ರಿಕೆಟಿಗ ಧೋನಿ ಇತ್ತೀಚೆಗೆ ಕಾಂಗ್ರೆಸ್ ನಾಯಕ ಪ್ರಫುಲ್ ಪಟೇಲ್ ಪುತ್ರ ಪೂರ್ಣ ಪಟೇಲ್ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸುದ್ದಿಯಾಗಿತ್ತು.
ಆ ಮದುವೆಗೆ ಪತ್ನಿ, ಪುತ್ರಿ ಸಮೇತರಾಗಿ ಧೋನಿ ಫೋಟೋಗೆ ಪೋಸ್ ಕೊಟ್ಟಿದ್ದು ವೈರಲ್ ಆಗಿತ್ತು. ಆದರೆ ಆ ವಿವಾಹ ಕಾರ್ಯಕ್ರಮದ ಇನ್ನೊಂದು ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಧೋನಿ ವಿವಾಹಕ್ಕೆಂದು ಬಂದು ಸ್ನೇಹಿತರ ಜತೆಗೆ ಬಾತ್ ರೂಂ ಬಳಿ ವಾಶ್ ಬೇಸಿನ್ ಪಕ್ಕದಲ್ಲಿ ಕುಳಿತು ಮಾತನಾಡುತ್ತಿರುವ ವಿಡಿಯೋವನ್ನು ಅವರ ಸ್ನೇಹಿತ, ಗಾಯಕ ರಾಹುಲ್ ವೈದ್ಯ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಈ ವಿಡಿಯೋ ನೋಡಿ ಧೋನಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಂತೂ ಧೋನಿ ಬಾತ್ ರೂಂನಲ್ಲಿ ಕುಳಿತಿದ್ದರೂ ಸುದ್ದಿಯೇ ಬಿಡಿ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.