Publish Date: Sat, 28 Jul 2018 (09:52 IST)
Updated Date: Sat, 28 Jul 2018 (09:53 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಮಹತ್ವದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಪಾಲಿಗೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಚಿಂತೆ ಶುರುವಾಗಿದೆ.
ಅಶ್ವಿನ್ ಎಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯವಾಡುವಾಗ ಬೆರಳಿಗೆ ಗಾಯ ಮಾಡಿಕೊಂಡಿದ್ದು, ಕೆಲ ಹೊತ್ತು ಆತಂಕ ಸೃಷ್ಟಿಸಿದರು. ಆದರೆ ಟೀಂ ಇಂಡಿಯಾ ವೈದ್ಯಕೀಯ ಸಿಬ್ಬಂದಿ ಅಶ್ವಿನ್ ಪರೀಕ್ಷೆ ನಡೆಸಿ ಗಾಯ ಸಣ್ಣ ಪ್ರಮಾಣದ್ದು ಎಂದು ಹೇಳಿದೆ.
ಹಾಗಿದ್ದರೂ ಮುನ್ನಚ್ಚರಿಕೆ ಕ್ರಮವಾಗಿ ಅಶ್ವಿನ್ ಅಭ್ಯಾಸ ಪಂದ್ಯದಲ್ಲಿ ನಂತರ ಆಟವಾಡದೇ ಇರಲು ನಿರ್ಧರಿಸಿದರು. ಆದರೆ ಭೋಜನ ವಿರಾಮದ ವೇಳೆಗೆ ನೆಟ್ಸ್ ನಲ್ಲಿ ಬೌಲಿಂಗ್ ನಡೆಸಿದ್ದು ಟೀಂ ಇಂಡಿಯಾ ಪಾಲಿಗೆ ಸಮಾಧಾನ ತಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.