Publish Date: Fri, 27 Jul 2018 (09:41 IST)
Updated Date: Fri, 27 Jul 2018 (09:44 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಕ್ರಿಕೆಟಿಗನಾಗುವುದಕ್ಕೆ ಮೊದಲು ಫುಟ್ಬಾಲ್ ಆಟಗಾರನಾಗಿದ್ದ ಎನ್ನುವುದು ಅವರ ಅಭಿಮಾನಿಗಳಿಗೆಲ್ಲಾ ಗೊತ್ತಿರುವ ವಿಚಾರವೇ.
ಟೀಂ ಇಂಡಿಯಾದಲ್ಲೂ ಅಭ್ಯಾಸದ ವೇಳೆ ಫುಟ್ಬಾಲ್ ಆಡುವಾಗ ಧೋನಿಯೇ ಒಂದು ಹೆಜ್ಜೆ ಮುಂದಿರುತ್ತಾರೆ. ಇದೀಗ ಹೇಗಿದ್ದರೂ ಕ್ರಿಕೆಟ್ ನಿಂದ ಬ್ರೇಕ್ ನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಧೋನಿ ತಮ್ಮ ಫುಟ್ಬಾಲ್ ಪ್ರತಿಭೆ ಪ್ರದರ್ಶಿಸಿದ್ದಾರೆ.
ಸಹಾಯಾರ್ಥ ಪಂದ್ಯವೊಂದರಲ್ಲಿ ಧೋನಿ ಫುಟ್ಬಾಲ್ ರಂಜಿಸಿದ್ದಾರೆ. ಧೋನಿ ಜತೆಗೆ ಧಡಕ್ ಸಿನಿಮಾ ಖ್ಯಾತಿಯ ನಟ ಇಶಾನ್ ಕಟ್ಟರ್ ಕೂಡಾ ಆಡಿದ್ದಾರೆ. ಈ ಸಂದರ್ಭದಲ್ಲಿ ಧೋನಿ, ಇಶಾನ್ ಕಟ್ಟರ್ ಗೆ ಕೆಲವು ಟಿಪ್ಸ್ ಕೂಡಾ ಕೊಟ್ಟಿದ್ದಾರೆ. ಅಂತೂ ಕ್ರಿಕೆಟ್ ನಿಂದ ಸಿಕ್ಕಿರುವ ಬಿಡುವನ್ನು ಧೋನಿ ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.