Publish Date: Mon, 23 Jul 2018 (11:05 IST)
Updated Date: Mon, 23 Jul 2018 (11:07 IST)
ಬುಲುವಾಯೊ: ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಪಾಕ್ ಕ್ರಿಕೆಟಿಗರು ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದ್ದಾರೆ. ಇದರ ನಡುವೆ ಪಾಕ್ ನಾಯಕ ಸರ್ಫ್ರಾಜ್ ಅಹಮ್ಮದ್ ಧೋನಿಯಂತೆ ಮಾಡಲು ಹೋಗಿ ಕೈಸುಟ್ಟುಕೊಂಡಿದ್ದಾರೆ.
ಪಾಕ್ ತಂಡದ ವಿಕೆಟ್ ಕೀಪರ್ ಕೂಡಾ ಆಗಿರುವ ಸರ್ಫ್ರಾಜ್ ಅಹಮ್ಮದ್ ಇದ್ದಕ್ಕಿದ್ದಂತೆ ಬೌಲಿಂಗ್ ಮಾಡಲು ಹೊರಟು ನಿರಾಸೆ ಅನುಭವಿಸಿದರು. ಹಿಂದೊಮ್ಮೆ ಧೋನಿ ಇದೇ ರೀತಿ ಕೀಪಿಂಗ್ ಗೆ ಕೊಂಚ ವಿಶ್ರಾಂತಿ ಕೊಟ್ಟು ಬೌಲಿಂಗ್ ಮಾಡಿ ವಿಕೆಟ್ ಕೂಡಾ ಕಿತ್ತಿದ್ದರು.
ಆದರೆ ಅದೇ ಸಾಹಸ ಮಾಡಲು ಹೋಗಿ ಸರ್ಪ್ರಾಜ್ ತಮ್ಮ ಎರಡು ಓವರ್ ಗಳ ಸ್ಪೆಲ್ ನಲ್ಲಿ 15 ರನ್ ಚಚ್ಚಿಸಿಕೊಂಡಿದ್ದಾರೆ. ಸರ್ಫ್ರಾಜ್ ಬೌಲಿಂಗ್ ಮಾಡುತ್ತಿದ್ದಾಗ ಬ್ಯಾಟ್ಸ್ ಮನ್ ಫಕರ್ ಝಮನ್ ಕೀಪಿಂಗ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.