Publish Date: Mon, 16 Jul 2018 (09:13 IST)
Updated Date: Mon, 16 Jul 2018 (09:15 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದಕ್ಕೆ ಹಿರಿಯ ಕ್ರಿಕೆಟಿಗ ಧೋನಿಯನ್ನು ಭಾರತೀಯ ಪ್ರೇಕ್ಷಕರೇ ಮೂದಲಿಸಿದ್ದಾರೆ.
ಧೋನಿ 323 ರನ್ ಗಳ ಬೃಹತ್ ಮೊತ್ತ ಚೇಸ್ ಮಾಡುವಾಗ 37 ರನ್ ಮಾಡಲು ಬರೋಬ್ಬರಿ 59 ಬಾಲ್ ತೆಗೆದುಕೊಂಡಿದ್ದರು. ಕೇವಲ 2 ಬೌಂಡರಿ ಹೊಡೆದಿದ್ದರು. ಹೀಗಾಗಿ ಪ್ರೇಕ್ಷಕರು ಇಷ್ಟೊಂದು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಧೋನಿಯನ್ನು ಲೇವಡಿ ಮಾಡುತ್ತಿದ್ದರು.
ಇದರ ಬಗ್ಗೆ ಪಂದ್ಯದ ನಂತರ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಭಾರತೀಯ ಸ್ಪಿನ್ನರ್ ಯಜುವೇಂದ್ರ ಚಾಹಲ್, ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಕೂಡಾ ಪ್ರೇಕ್ಷಕರ ವರ್ತನೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.