Publish Date: Sun, 15 Jul 2018 (09:21 IST)
Updated Date: Sun, 15 Jul 2018 (09:23 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಈಗಾಗಲೇ ಮದುವೆಯಾಗಿ ಮುದ್ದಾದ ಮಗಳಿಗೆ ಅಪ್ಪನಾಗಿದ್ದಾರೆ. ಹಾಗಿದ್ದರೂ ಧೋನಿ ಮೇಲೆ ಹುಡುಗಿಯರ ಕ್ರೇಜ್ ಕಡಿಮೆಯಾಗಿಲ್ಲ. ಸಾಮಾನ್ಯರು ಬಿಡಿ, ಬಾಲಿವುಡ್ ನಟಿಯರೂ ಇದಕ್ಕೆ ಹೊರತಲ್ಲ.
ಇದೀಗ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಧೋನಿ ಜತೆ ಸಪರೇಟ್ ಆಗಿ ಡಿನ್ನರ್ ಡೇಟಿಂಗ್ ಹೋಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಕಿಯಾರಾ ಅಡ್ವಾಣಿ ಧೋನಿ ಬಯೋಗ್ರಫಿ ಸಿನಿಮಾದಲ್ಲಿ ಧೋನಿ ಪತ್ನಿಯ ಪಾತ್ರ ನಿರ್ವಹಿಸಿದ್ದರು.
ಸಂದರ್ಶನವೊಂದರಲ್ಲಿ ಕಿಯಾರಾ ಬಳಿ ನಿಮಗೆ ಯಾವ ಕ್ರಿಕೆಟಿಗನ ಜತೆ ಡೇಟಿಂಗ್ ಹೋಗಲು ಇಷ್ಟ ಎಂದು ಕೇಳಿದ್ದಕ್ಕೆ ಅವರು ಧೋನಿ ಜತೆ ಎಂದಿದ್ದಾರೆ. ಧೋನಿ ಹರ್ಭಜನ್ ಸಿಂಗ್ ವಿವಾಹ ಸಂದರ್ಭದಲ್ಲಿ ತಮ್ಮ ಪರಿವಾರವನ್ನು ನೋಡಿಕೊಂಡ ರೀತಿ ನೋಡಿ ಕಿಯಾರಾ ಫಿದಾ ಆಗಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.