Publish Date: Mon, 16 Jul 2018 (09:04 IST)
Updated Date: Mon, 16 Jul 2018 (09:05 IST)
ಲಾರ್ಡ್ಸ್: ಸೋತಾಗಲೆಲ್ಲಾ ಪದೇ ಪದೇ ಧೋನಿ ಬ್ಯಾಟಿಂಗ್ ನ್ನು ಟಾರ್ಗೆಟ್ ಮಾಡಿ ಟೀಕೆ ಮಾಡುವವರಿಗೆ ನಾಯಕ ವಿರಾಟ್ ಕೊಹ್ಲಿ ತಿರುಗೇಟು ಕೊಟ್ಟಿದ್ದಾರೆ.
ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಧೋನಿ ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರೂ ಭಾರತ ತಂಡವನ್ನು ದಡ ಮುಟ್ಟಿಸಲಾಗಲಿಲ್ಲ. ಹೀಗಾಗಿ ಪಂದ್ಯದ ನಂತರ ಅವರ ವಿರುದ್ಧ ಟೀಕಾಕಾರರು ಟೀಕೆ ಮಾಡಬಹುದೆಂದು ಮೊದಲೇ ಕೊಹ್ಲಿ ಅವರ ಪರವಾಗಿ ಮಾತನಾಡಿದ್ದಾರೆ.
‘ಅವರು ಯಾವತ್ತೂ ಕ್ರೀಸ್ ಗೆ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಈವತ್ತು ಅವರ ದುರದೃಷ್ಟಕ್ಕೆ ತಕ್ಕ ಪಾರ್ಟನರ್ ಸಿಗಲಿಲ್ಲ. ಹಾಗಿದ್ದರೂ ಜನ ಅವರ ಫಿನಿಶಿಂಗ್ ತಾಕತ್ತಿನ ಬಗ್ಗೆ ಮಗಿ ಬೀಳುತ್ತಾರೆ. ಯಾರೇ ಏನೇ ಹೇಳಿದರು ನಾವು ಮಾತ್ರ ಧೋನಿ ಮೇಲೆ ವಿಶ್ವಾಸವಿಟ್ಟಿದ್ದೇವೆ’ ಎಂದು ಕೊಹ್ಲಿ ಪಂದ್ಯದ ನಂತರ ಸಮಾರೋಪ ಸಮಾರಂಭದಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.