Publish Date: Thu, 19 Jul 2018 (10:32 IST)
Updated Date: Thu, 19 Jul 2018 (10:34 IST)
ಲೀಡ್ಸ್: ಧೋನಿ ಕಳಪೆ ಫಾರ್ಮ್, ಮೂರನೇ ಏಕದಿನ ಪಂದ್ಯದ ಬಳಿಕ ಅಂಪಾಯರ್ ಬಳಿಯಿಂದ ಬಾಲ್ ಪಡೆದಿದ್ದನ್ನು ನೋಡಿ ಅವರ ನಿವೃತ್ತಿ ಸುದ್ದಿ ಜೋರಾಗಿ ಹರಡಿತ್ತು.
ಆದರೆ ಅದಕ್ಕೀಗ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಧೋನಿ ನಿಜವಾಗಿ ಬಾಲ್ ಪಡೆದಿದ್ದರ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.
ಧೋನಿ ನಿವೃತ್ತಿ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗೆ ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ ‘ಎಂಎಸ್ ಎಲ್ಲೂ ಹೋಗಲ್ಲ. ಇದೆಲ್ಲಾ ತಲೆಬುಡವಿಲ್ಲದ ಸುದ್ದಿ. ಎಂಎಸ್ ಆ ಪಂದ್ಯದ ಬಾಲ್ ನ್ನು ಬೌಲಿಂಗ್ ಕೋಚ್ ಭರತ್ ಅರುಣ್ ಗೆ ತೋರಿಸಲು ಬಯಸಿದ್ದರು. ಆ ಬಾಲ್ ನ ಪರಿಸ್ಥಿತಿ ಹೇಗಿದೆ ಎಂದು ತೋರಿಸಿ ಪಿಚ್ ನ ಸ್ಥಿತಿ ಗತಿ ಬಗ್ಗೆ ವಿಶ್ಲೇಷಣೆ ಮಾಡಲು ಬಯಸಿದ್ದರು. ಅದಕ್ಕಾಗಿಯೇ ಬಾಲ್ ಪಡೆದಿದ್ದರಷ್ಟೇ. ಇದೆಲ್ಲಾ ರಬ್ಬಿಶ್’ ಎಂದು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.