Publish Date: Mon, 23 Jul 2018 (10:08 IST)
Updated Date: Mon, 23 Jul 2018 (10:10 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಲ್ಲಿ ಪರಿಣಾಮಕಾರಿ ಬೌಲಿಂಗ್ ನಡೆಸಿದ್ದ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ಗೆ ಟೆಸ್ಟ್ ಸರಣಿಯಲ್ಲಿ ಹಾದಿ ಅಷ್ಟು ಸುಗಮವಾಗದು ಎಂದು ಇಂಗ್ಲೆಂಡ್ ಮಾಜಿ ಆಟಗಾರ ಅಲೆಕ್ಸ್ ಸ್ಟುವರ್ಟ್ ಎಚ್ಚರಿಕೆ ನೀಡಿದ್ದಾರೆ.
ಈಗೀಗ ಇಂಗ್ಲೆಂಡ್ ಆಟಗಾರರು ಕುಲದೀಪ್ ತಂತ್ರಗಾರಿಕೆಯನ್ನು ಅರಿಯುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ಕಿರು ಮಾದರಿ ಕ್ರಿಕೆಟ್ ನಂತಲ್ಲ. ಇಲ್ಲಿ ಪರಿಸ್ಥಿತಿ ಸಂಪೂರ್ಣ ವ್ಯತ್ಯಸ್ಥವಾಗಿರುತ್ತದೆ. ಹಾಗಾಗಿ ಕುಲದೀಪ್ ಯಾದವ್ ಗೆ ಕಷ್ಟವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಒಬ್ಬ ಸ್ಪಿನ್ನರ್ ನನ್ನು ಹೆಚ್ಚು ಎದುರಿಸಿದಷ್ಟು ಅವನ ತಂತ್ರಗಾರಿಕೆ ಬಯಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಲಾರ್ಡ್ಸ್ ಏಕದಿನ ಪಂದ್ಯದ ನಂತರ ಜೋ ರೂಟ್ ನಂತಹ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಕುಲದೀಪ್ ತಂತ್ರಗಾರಿಕೆಗೆ ಹೊಂದಿಕೊಂಡಿದ್ದಾರೆ. ಹೀಗಾಗಿ ಇನ್ನು ಕುಲದೀಪ್ ಎಷ್ಟು ದಿನ ಟೆಸ್ಟ್ ಕ್ರಿಕೆಟ್ ನಲ್ಲಿ ಬೌಲ್ ಮಾಡಬಹುದು ಎಂಬುದು ಕುತೂಹಲವಿದೆಯಷ್ಟೇ’ ಎಂದು ಸ್ಟುವರ್ಟ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.