Publish Date: Sat, 21 Jul 2018 (09:16 IST)
Updated Date: Sat, 21 Jul 2018 (09:17 IST)
ಲಂಡನ್: ಏಕದಿನ ಸರಣಿ ಸೋತು, ಟೆಸ್ಟ್ ಸರಣಿ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಂ ಇಂಡಿಯಾದಲ್ಲಿ ಸಂಕಟದ ಛಾಯೆ ದಟ್ಟವಾಗಿದೆ.
ಇಂಗ್ಲೆಂಡ್ ಮೊದಲೇ ವೇಗಿಗಳ ಸ್ವರ್ಗ. ಅದು ಹೇಗೋ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಎಂಬ ಸ್ಪಿನ್ ಜೋಡಿ ಸ್ವಲ್ಪ ಯಶಸ್ಸು ಪಡೆದರೂ ಟೆಸ್ಟ್ ಸರಣಿಯಲ್ಲಿ ಸ್ಪಿನ್ ಬೌಲಿಂಗ್ ಮಾತ್ರ ನಂಬಿ ಕೂರುವಂತಿಲ್ಲ.
ಸದ್ಯಕ್ಕೆ ಸ್ಪಿನ್ನರ್ ಗಳ ಬಗ್ಗೆ ಟೀಂ ಇಂಡಿಯಾಕ್ಕೆ ಚಿಂತೆಯಿಲ್ಲ. ಆದರೆ ವೇಗಿಗಳದ್ದೇ ಚಿಂತೆ. ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಗಾಯಾಳುವಾಗಿ ಕೂತಿರುವುದು ಭಾರತಕ್ಕೆ ದೊಡ್ಡ ಶಾಕ್ ಆಗಿದೆ. ಇವರಿಬ್ಬರ ಅನುಪಸ್ಥಿತಿಯಲ್ಲಿ ಉಮೇಶ್ ಯಾದವ್, ಇಶಾಂತ್ ಶರ್ಮಾ ವೇಗದ ಬೌಲಿಂಗ್ ನೇತೃತ್ವ ವಹಿಸಬೇಕಿದೆ. ಗಾಯಾಳುಗಳ ಚಿಂತೆಯಲ್ಲಿರುವ ಟೀಂ ಇಂಡಿಯಾಕ್ಕೆ ಟೆಸ್ಟ್ ಸರಣಿ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.