Publish Date: Fri, 20 Jul 2018 (09:09 IST)
Updated Date: Fri, 20 Jul 2018 (10:08 IST)
ಸಿಡ್ನಿ: ವಿರಾಟ್ ಕೊಹ್ಲಿ ತನ್ನನ್ನು ಕೆಣಕಿದವರಿಗೆ ಎದಿರೇಟು ಕೊಡದೇ ಇರುವ ಜಾಯಮಾನದವರೇ ಅಲ್ಲ. ಈ ಭಯಕ್ಕೇ ಇದೀಗ ಆಸ್ಟ್ರೇಲಿಯಾ ಬೌಲರ್ ಪ್ಯಾಟ್ ಕ್ಯುಮಿನ್ಸ್ ತಾವು ಹಿಂದೆ ನೀಡಿದ್ದ ಹೇಳಿಕೆಯನ್ನೇ ಉಲ್ಟಾ ಮಾಡಿದರೇ?!
ಪ್ಯಾಟ್ ಕ್ಯುಮಿನ್ಸ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಮುಂದಿನ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಂದೇ ಒಂದು ಶತಕ ಹೊಡೆಯಲ್ಲ ಎಂದಿದ್ದರು. ಆದರೆ ಈಗ ತಮ್ಮ ಹೇಳಿಕೆಯನ್ನೇ ಬದಲಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾಗೆ ನೀಡಿದ ಸಂದರ್ಶನದಲ್ಲಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ಹಾಗೆ ಹೇಳಿಯೇ ಇರಲಿಲ್ಲ. ವಿರಾಟ್ ಕೊಹ್ಲಿ ಈ ಬಾರಿ ನಮ್ಮ ವಿರುದ್ಧ ಒಂದೇ ಒಂದು ಶತಕ ಹೊಡೆಯರು ಎಂಬುದು ನನ್ನ ಆಸೆ ಎಂದು ಹೇಳಿದ್ದೆ. ಈ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದೆ. ಆದರೆ ನನ್ನ ಹೇಳಿಕೆಯನ್ನು ತಿರುಚಲಾಯಿತು ಎಂದು ಕ್ಯುಮಿನ್ಸ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.