Publish Date: Fri, 20 Jul 2018 (09:17 IST)
Updated Date: Fri, 20 Jul 2018 (10:07 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಕ್ರಿಕೆಟ್ ನಲ್ಲಿ ಅದ್ಭುತವಾಗಿ ಆಡಿದರೂ ಟೆಸ್ಟ್ ತಂಡದಲ್ಲಿ ತಮಗೆ ಸ್ಥಾನ ನೀಡದೇ ಇರುವುದಕ್ಕೆ ರೋಹಿತ್ ಶರ್ಮಾ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ ನಿನ್ನೆ ಟೆಸ್ಟ್ ತಂಡ ಪ್ರಕಟಿಸಿತ್ತು. ಅದರಲ್ಲಿ ಕ್ರಿಕೆಟಿಗರ ಪಟ್ಟಿ ನೋಡಿ ರೋಹಿತ್ ಅಭಿಮಾನಿಗಳು ಸಿಟ್ಟಾಗಿದ್ದು, ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡಿಯೂ ರೋಹಿತ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಪರವಾಗಿ ಮಾತನಾಡಿದ ಟ್ವಿಟರಿಗೆ ಉತ್ತರವಾಗಿ ರೋಹಿತ್ ಶರ್ಮಾ ಸ್ವೀಟ್ ಆಂಡ್ ಶಾರ್ಟ್ ಆಗಿ ಟ್ವೀಟ್ ಮಾಡಿದ್ದು, ಇದು ಒಂಥರಾ ಆಯ್ಕೆಗಾರರಿಗೆ ಕೊಟ್ಟ ಟಾಂಗ್ ನಂತಿದೆ. ‘ಸೂರ್ಯ ನಾಳೆಯೂ ಹುಟ್ಟುತ್ತಾನೆ’ ಎಂದು ಸ್ಮೈಲಿ ಸಮೇತ ರೋಹಿತ್ ಟ್ವೀಟ್ ಮಾಡಿದ್ದಾರೆ. ಅಂದರೆ ತನ್ನನ್ನು ಸೂರ್ಯನಿಗೆ ಹೋಲಿಸಿಕೊಂಡಿರುವ ರೋಹಿತ್ ತನ್ನನ್ನು ನಾಳೆಯಾದರೂ ಆಯ್ಕೆ ಮಾಡಲೇಬೇಕಾಗುತ್ತದೆ ಎಂದಂತೆ ಈ ಟ್ವೀಟ್ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.