Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಎಸೆಕ್ಸ್ ತಂಡ

ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಎಸೆಕ್ಸ್ ತಂಡ
ಚೆಮ್ಸ್ ಫೋರ್ಡ್ , ಶನಿವಾರ, 28 ಜುಲೈ 2018 (09:48 IST)
ಚೆಮ್ಸ್ ಫೋರ್ಡ್: ಇಂಗ್ಲೆಂಡ್ ಟೆಸ್ಟ್ ಸರಣಿಗೆ ಮೊದಲು ಮೂರು ದಿನಗಳ ಅಭ್ಯಾಸ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಪರ ಅರ್ಧಶತಕ ಗಳಿಸಿದ ನಾಯಕ ವಿರಾಟ್ ಕೊಹ್ಲಿಗೆ ಎಸೆಕ್ಸ್ ತಂಡ ಅವಮಾನ ಮಾಡಿದೆ.
 

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಪರ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿದ್ದರು. ಕೊಹ್ಲಿ ಅರ್ಧಶತಕ ಗಳಿಸಿದ ವಿಡಿಯೋವನ್ನು ತನ್ನ ಟ್ವಿಟರ್ ಪೇಜ್ ನಲ್ಲಿ ಪೋಸ್ಟ್ ಮಾಡಿದ ಎಸೆಕ್ಸ್ ‘ಈತ ಕ್ರಿಕೆಟ್ ನಲ್ಲಿ ತೀರಾ ಕಳಪೆ ಏನೂ ಅಲ್ಲ. 67 ಬಾಲ್ ನಲ್ಲಿ ಅರ್ಧಶತಕ ಬಂತು’ ಎಂದು ಬರೆದುಕೊಂಡಿದೆ.

ಇದನ್ನು ನೋಡಿ ಕೊಹ್ಲಿ ಅಭಿಮಾನಿಗಳು ಸಿಟ್ಟಿಗೆದ್ದಿದ್ದು, ಇಡೀ ವಿಶ್ವಕ್ಕೇ ಇವರು ರನ್ ಮೆಷಿನ್ ಅಂತ ಗೊತ್ತಿದೆ. ನಿಮಗೆ ಈಗ ಗೊತ್ತಾಯಿತಾ? ಅವರು ನಿಮ್ಮ ಅಪ್ಪನಂತವರು. ಇದು ಇಂಗ್ಲೆಂಡ್ ಕ್ರಿಕೆಟ್ ಗೆ ಶುಭ ಸೂಚನೆಯಲ್ಲ. ವಿರಾಟ್ ಜೀವಂತ ದಂತಕತೆ ಎಂದು ಅಭಿಮಾನಿಗಳು ಕೊಹ್ಲಿಯನ್ನು ತೀರಾ ಸಾಮಾನ್ಯನಂತೆ ಬರೆದುಕೊಂಡ ಎಸೆಕ್ಸ್ ಗೆ ಮಂಗಳಾರತಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

‘ನೀನೂ ಶರ್ಟ್ ಬಿಚ್ಚು’ ವಿವಿಎಸ್ ಲಕ್ಷ್ಮಣ್ ಗೆ ಲಾರ್ಡ್ಸ್ ನಲ್ಲಿ ಗಂಗೂಲಿ ಹೀಗೆಂದು ಅದೇಶಿಸಿದ್ದರಂತೆ!