Select Your Language

Notifications

webdunia
webdunia
webdunia
webdunia

ಬ್ಯಾಡ್ಮಿಂಟನ್ ಕ್ರೀಡೆ ನಗರಕ್ಕೆ ಪ್ರದೇಶಕ್ಕೆ ಮಾತ್ರ ಸೀಮಿತವಾಗಬಾರದು : ಅರವಿಂದ್ ಭಟ್

ಬ್ಯಾಡ್ಮಿಂಟನ್ ಕ್ರೀಡೆ ನಗರಕ್ಕೆ ಪ್ರದೇಶಕ್ಕೆ ಮಾತ್ರ ಸೀಮಿತವಾಗಬಾರದು : ಅರವಿಂದ್ ಭಟ್
ಬೆಂಗಳೂರು , ಸೋಮವಾರ, 30 ಜುಲೈ 2018 (15:45 IST)
ವ್ಯಾನ್ಕಿಶರ್ ಸ್ಪೋರ್ಟ್ಸ್ 2018ರ ಚಾಂಪಿಯನ್ ಬ್ಯಾಡ್ಮಿಂಟನ್ ಎಕ್ಸ್ಟ್ರಾವ್ಯಾಗ್ನಜಾ ಮೂರನೇ ಆವೃತ್ತಿಯ ಟ್ರೋಫಿಯನ್ನು ಅನಾವರಣಗೊಳಿಸುವ ಮೂಲಕ ಬ್ಯಾಡ್ಮಿಂಟನ್ ಚಾಂಪಿಯನ್ ಅರವಿಂದ್ ಭಟ್ ಅವರು ಚಾಲನೆ ನೀಡಿ ಮಾತನಾಡಿದ ಅವರು, ಬ್ಯಾಡ್ಮಿಂಟನ್ ಕ್ರೀಡೆ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೇ ಗ್ರಾಮೀಣ ಪ್ರತಿಭೆಗಳು ಸಹ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು ಕರೆ ನೀಡಿದರು.  
ಈ ರೀತಿಯ ಪಂದ್ಯಾವಳಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಕಾರಿಯಾಗಿದೆ. ಅಲ್ಲದೇ ಉದಯೋನ್ಮುಖ ಪ್ರತಿಭೆಗಳನ್ನು ಒದಗಿಸುತ್ತದೆ ಮತ್ತು ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಅವರ ಕನಸು ನನಸಾಗಿಸಲು ಸಾಧ್ಯವಾಗದ ಪ್ರತಿಭಾವಂತ ಆಟಗಾರರನ್ನು ಗುರುತಿಸುವ ಪ್ರಯತ್ನ ಶ್ಲಾಘಿಸಿದ್ದಾರೆ. ಆಟಗಾರರ ಅವಕಾಶಗಳ ಕೊರತೆಯಿಂದ ಬಳಲುತ್ತಿರುವ ಯಾವುದೇ ಪ್ರತಿಭಾನ್ವಿತ ಯುವಕರಿಗೆ ಇದು ತುಂಬಾ ಮುಖ್ಯವಾಗಿದೆ" ಎಂದು ಅವರು ಹೇಳಿದರು.
 
ವ್ಯಾನ್ಕಿಶರ್ ಸ್ಪೋರ್ಟ್ಸ್ ಆಯೋಜಿಸಿರುವ ‘ಚಾಂಪಿಯನ್ಸ್ ಬ್ಯಾಡ್ಮಿಂಟನ್ ಎಕ್ಸ್ಟ್ರಾವ್ಯಾಗ್ನಜಾ 2018’ ರ ಮೂರನೇ ಆವೃತ್ತಿಯ ಹರಾಜು ದಿನವಾದ ಇಂದು ಪಂದ್ಯದ ಟ್ರೋಫಿಯನ್ನು ಅನಾವರಣ ಮಾಡಿ ಪದ್ಯಾವಳಿಗೆ ಚಾಲನೆ ನೀಡಲಾಯಿತು.
webdunia
ಪಂದ್ಯದ ತಂಡಗಳು ಮತ್ತು ಆಟಗಾರರನ್ನು ಇಂದು ಘೋಷಿಸಿದ್ದು, ಮೂರು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯು ಆಗಸ್ಟ್ 31 ರಂದು ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯವಳಿಯು ಸೆಪ್ಟೆಂಬರ್ 2 ರಂದು ನಡೆಯಲಿದೆ.
 
ರಾಜ್ಯದಾದ್ಯಂತ ಸುಮಾರು 600 ಆಟಗಾರರು ಪಂದ್ಯಾವಳಿಗೆ ನೋಂದಾಯಿಸಿದ್ದಾರೆ. ಇಂದು ನಡೆದ ಹರಾಜು ಪ್ರಕ್ರಿಯೆಯು ಅಂಕಗಳ-ಆಧಾರಿತ ಸ್ವರೂಪದಲ್ಲಿ 2೦೦ ಆಟಗಾರರನ್ನು 1೦ ತಂಡಗಳು ಪರಸ್ಪರ ಸುತ್ತಿನಲ್ಲಿ ಆಯ್ಕೆಮಾಡಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ, ಗೆಳತಿಯರ ಜತೆ ಇರಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅನುಮತಿ