Select Your Language

Notifications

webdunia
webdunia
webdunia
webdunia

ಸೈನಾ ನೆಹ್ವಾಲ್ ಗೊಂದು ಕಡೆ, ಪಿವಿ ಸಿಂಧುಗೆ ಇನ್ನೊಂದು ಕಡೆ! ಕೋಚ್ ಗೋಪಿಚಂದ್ ಟ್ರಿಕ್!

ಸೈನಾ ನೆಹ್ವಾಲ್ ಗೊಂದು ಕಡೆ, ಪಿವಿ ಸಿಂಧುಗೆ ಇನ್ನೊಂದು ಕಡೆ! ಕೋಚ್ ಗೋಪಿಚಂದ್ ಟ್ರಿಕ್!
ಹೈದರಾಬಾದ್ , ಬುಧವಾರ, 6 ಜೂನ್ 2018 (09:15 IST)
ಹೈದರಾಬಾದ್: ಭಾರತದ ಖ‍್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧುಗೆ ಕೋಚ್ ಗೋಪಿಚಂದ್ ಇದೀಗ ಬೇರೆ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದಾರಂತೆ!
 

ಸೈನಾ ನೆಹ್ವಾಲ್ ತಮ್ಮ ಆರಂಭದ ದಿನಗಳಲ್ಲಿಯೇ ಗೋಪಿಚಂದ್ ಜತೆ ತರಬೇತಿ ಪಡೆಯುತ್ತಿದ್ದರು. ಆದರೆ ಇದರ ನಡುವೆ ಒಮ್ಮೆ ತಮಗೆ ಪ್ರಾಶಸ್ತ್ಯ ನೀಡುತ್ತಿಲ್ಲವೆಂಬ ಕಾರಣಕ್ಕೆ ಸೈನಾ ಮುನಿಸಿಕೊಂಡು ವಿಮಲ್ ಕುಮಾರ್ ಬಳಿ ತರಬೇತಿ ಪಡೆಯಲು ಬಂದಿದ್ದರು. ಆದರೆ ಈ ಸಂದರ್ಭದಲ್ಲಿ ಅವರ ಪ್ರದರ್ಶನ ಚೆನ್ನಾಗಿರಲಿಲ್ಲ. ಹೀಗಾಗಿ ಮತ್ತೆ ಗೋಪಿಚಂದ್ ಗೂಡು ಸೇರಿ, ಸಿಂಧುವನ್ನೇ ಸೋಲಿಸಿ ಮರಳಿ ಫಾರ್ಮ್ ಗೆ ಬಂದಿದ್ದರು.

ಆದರೆ ಸಿಂಧು ಕೂಡಾ ಗೋಪಿಚಂದ್ ಮೆಚ್ಚಿನ ಶಿಷ್ಯೆಯೇ. ಆದರೂ ಇವರಿಬ್ಬರು ಸ್ಟಾರ್ ಆಟಗಾರ್ತಿಯರ ನಡುವೆ ವೃತ್ತಿ ವಿಚಾರದಲ್ಲಿ ಸದಾ ಹಗ್ಗ ಜಗ್ಗಾಟ ನಡೆಯುತ್ತದೆ ಎಂಬ ಗುಸು ಗುಸು ಇದೆ. ಇತ್ತೀಚೆಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸೈನಾ, ತಮ್ಮನ್ನು ಸೋಲಿಸಿದ ಮೇಲಂತೂ ಒಂದೇ ಅಕಾಡೆಮಿಯಲ್ಲಿ ಆಡುವುದರಿಂದ ದೌರ್ಬಲ್ಯಗಳು ಸುಲಭವಾಗಿ ಎದುರಾಳಿಗೆ ಗೊತ್ತಾಗುತ್ತದೆ ಎನ್ನುವ ಕಾರಣಕ್ಕೆ ಸಿಂಧು ಹಿಂದಿನ ಅಕಾಡೆಮಿಯಿಂದ ಹೊರಬರಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಇಬ್ಬರೂ ಮೆಚ್ಚಿನ ಶಿಷ್ಯೆಯರಿಗೆ ಗೋಪಿಚಂದ್ ಬೇರೆ ಬೇರೆ ಅಕಾಡೆಮಿಯಲ್ಲಿ ತರಬೇತಿ ನೀಡಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ವಿರುದ್ಧ ಆಡುವ ಮೊದಲೇ ಅಫ್ಘಾನಿಸ್ತಾನ ಬೌಲರ್ ರಶೀದ್ ಖಾನ್ ಗೆ ಶುರುವಾಗಿದೆ ನಡುಕ!