Publish Date: Wed, 06 Jun 2018 (09:05 IST)
Updated Date: Wed, 06 Jun 2018 (09:07 IST)
ನವದೆಹಲಿ: ಐಪಿಎಲ್ ನಲ್ಲಿ ಸದ್ದು ಮಾಡಿದ ಅಫ್ಘಾನಿಸ್ತಾನ ಸ್ಪಿನ್ ಬೌಲರ್ ರಶೀದ್ ಖಾನ್ ಬಗ್ಗೆ ಇದೀಗ ಭಾರತದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಆದರೆ ರಶೀದ್ ಮನದಲ್ಲಿ ಓಡುತ್ತಿರುವುದೇ ಬೇರೆ.
ಟೀಂ ಇಂಡಿಯಾ ವಿರುದ್ಧ ಬೆಂಗಳೂರಿನಲ್ಲಿ ಜೂನ್ 14 ರಿಂದ ಅಫ್ಘಾನಿಸ್ತಾನ ತಂಡ ಏಕೈಕ ಟೆಸ್ಟ್ ಪಂದ್ಯವಾಡುತ್ತಿದ್ದು, ಈ ಪಂದ್ಯದಲ್ಲಿ ರಶೀದ್ ಖಾನ್ ಗಮನ ಸೆಳೆಯಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದಾರೆ.
ಆದರೆ ರಶೀದ್ ಖಾನ್ ಮನದಲ್ಲಿ ಭಯ ತುಂಬಿದೆಯಂತೆ. ಒಂದು ವೇಳೆ ಟೀಂ ಇಂಡಿಯಾ ಒಂದೇ ಒಂದು ವಿಕೆಟ್ ಕೂಡಾ ಕೀಳಲು ಸಾಧ್ಯವಾಗದೇ ಹೋದರೆ ಎಂಬುದೇ ಆ ಭಯ. ಅಥವಾ ಮೊದಲು ಒಂದೆರಡು ವಿಕೆಟ್ ಕಿತ್ತು ನಂತರ ವಿಕೆಟ್ ಸಿಗದೇ ಹೋದರೆ ಎಂಬ ಭಯ ಅವರನ್ನು ಕಾಡುತ್ತಿದೆಯಂತೆ. ಹಾಗಿದ್ದರೂ ತಮಗೆ ತಮ್ಮ ತಂಡದ ಪ್ರತಿಭಾವಂತ ಆಟಗಾರರಿಂದ ಬೆಂಬಲ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ರಶೀದ್.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.