Select Your Language

Notifications

webdunia
webdunia
webdunia
webdunia

ಚೆಂಡು ವಿರೂಪ ಪ್ರಕರಣದ ನಂತರ ಆಸಿಸ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ಕತೆ ಏನಾಗಿತ್ತು ಗೊತ್ತಾ?!

ಚೆಂಡು ವಿರೂಪ ಪ್ರಕರಣದ ನಂತರ ಆಸಿಸ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ಕತೆ ಏನಾಗಿತ್ತು ಗೊತ್ತಾ?!
ಸಿಡ್ನಿ , ಬುಧವಾರ, 6 ಜೂನ್ 2018 (09:03 IST)
ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿದ್ದಾಗ ದ.ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೀವ್ ಸ್ಮಿತ್ ಒಂದು ವರ್ಷ ನಿಷೇಧ ಶಿಕ್ಷೆಗೊಳಗಾಗಿದ್ದು ಎಲ್ಲರಿಗೂ ಗೊತ್ತೇ ಇದೆ.

ಈ ಪ್ರಕರಣ ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸಿತ್ತು. ನಾಯಕ ಸ್ಮಿತ್ ಜತೆ ಉಪನಾಯಕ ಡೇವಿಡ್ ವಾರ್ನರ್, ಸಹ ಕ್ರಿಕೆಟಿಗ ಬೆನ್ ಕ್ರಾಫ್ಟ್ ನಿಷೇಧಕ್ಕೊಳಗಾಗಿದ್ದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಮಿತ್ ಕಣ್ಣೀರು ಮಿಡಿಯುತ್ತಾ ಕ್ಷಮೆ ಯಾಚಿಸಿದ್ದರು. ಇದಾದ ಬಳಿಕವೂ ನಾಲ್ಕು ದಿನಗಳ ನಿರಂತರವಾಗಿ ಸ್ಮಿತ್ ಅಳುತ್ತಲೇ ಇದ್ದರಂತೆ. ಹಾಗಂತ ಅವರೇ ಸಿಡ್ನಿಯ ಶಾಲಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಬಹಿರಂಗಪಡಿಸಿದ್ದಾರೆ. ಮನದೊಳಿಗನ ಭಾವನೆಗಳನ್ನು ಮುಕ್ತವಾಗಿ ಹೊರಹಾಕಬೇಕು ಎಂದೂ ಅವರು ಈ ಸಂದರ್ಭದಲ್ಲಿ ಮಕ್ಕಳಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮದೇ ಪ್ರತಿಮೆ ಎದುರು ಸೆಲ್ಫೀ ತೆಗೆಯಲು ಅಭಿಮಾನಿಗಳನ್ನು ಆಹ್ವಾನಿಸಿದ ಕೊಹ್ಲಿ