Select Your Language

Notifications

webdunia
webdunia
webdunia
Friday, 25 April 2025
webdunia

ಕಳಂಕಿತ ಸ್ಟೀವ್ ಸ್ಮಿತ್ ಕ್ರಿಕೆಟ್ ಕಿಟ್ ಕಸದ ಬುಟ್ಟಿಗೆ ಹಾಕಿದ ತಂದೆ!

ಸ್ಟೀವ್ ಸ್ಮಿತ್
ಸಿಡ್ನಿ , ಸೋಮವಾರ, 2 ಏಪ್ರಿಲ್ 2018 (11:17 IST)
ಸಿಡ್ನಿ: ಬಾಲ್ ವಿರೂಪ ಪ್ರಕರಣದಲ್ಲಿ ಕಳಂಕಿತರಾಗಿ ಒಂದು ವರ್ಷ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಕ್ರಿಕೆಟ್ ಪರಿಕರಗಳನ್ನು ತಂದೆ ಕಸದ ಬುಟ್ಟಿಗೆ ಹಾಕಿದ್ದಾರಂತೆ!

ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಸ್ಟೀವ್ ಸ್ಮಿತ್ ತಮ್ಮ ತಪ್ಪಿಗೆ ಕ್ಷಮೆಯಾಚಿಸುತ್ತಾ ಕಣ್ಣೀರು ಹಾಕಿದ್ದರು. ಈ ಘಟನೆಯನ್ನು ತಾನೆಂದೂ ಮರೆಯಲ್ಲ ಎಂದಿದ್ದರು. ಆ ಸಂದರ್ಭದಲ್ಲಿ ತಂದೆ ಪೀಟರ್ ಸ್ಮಿತ್, ಸ್ಟೀವ್ ಬೆನ್ನ ಹಿಂದೆಯೇ ಬೆಂಬಲವಾಗಿ ನಿಂತಿದ್ದರು.

ಈ ಬಗ್ಗೆ ವಿಡಿಯೋ ಒಂದನ್ನು ಪ್ರಸಾರ ಮಾಡಿರುವ ಟಿವಿ ವಾಹಿನಿಯೊಂದು ಪೀಟರ್, ಸ್ಮಿತ್ ಕ್ರಿಕೆಟ್ ಕಿಟ್ ನ್ನು ಕಾರಿನಿಂದ ಹೊರತೆಗೆದು, ಬೇಡದ ವಸ್ತುಗಳನ್ನಿಡುವ ಗ್ಯಾರೇಜ್ ನಲ್ಲಿ ಹಾಕುತ್ತಿದ್ದಾರೆ. ಜತೆಗೆ ಆತ ಇನ್ನು ಸರಿಯಾಗುತ್ತಾನೆ ಎಂದು ಹೇಳುತ್ತಾರೆ.

ಇದೀಗ ಮಗನಿಗೆ ಮತ್ತೆ ಕಹಿ ನೆನಪುಗಳು ಕಾಡದೇ ಇರಲು ಸ್ಮಿತ್ ಹೆಚ್ಚು ಇಷ್ಟಪಡುವ ಕ್ರಿಕೆಟ್ ಕಿಟ್ ಗಳನ್ನು ಕಸದ ಬುಟ್ಟಿಗೆ ಎಸೆದಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡೇವಿಡ್ ವಾರ್ನರ್ ಚೆಂಡು ವಿರೂಪಗೊಳಿಸಲು ಪ್ರೇರೇಪಣೆಯಾಗಿದ್ದು ಸೆಕ್ಸ್ ಪುರಾಣವಂತೆ!