Publish Date: Mon, 02 Apr 2018 (11:13 IST)
Updated Date: Mon, 02 Apr 2018 (11:15 IST)
ಸಿಡ್ನಿ: ಚೆಂಡು ವಿರೂಪ ಪ್ರಕರಣದಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ವಿಲನ್ ಗಳಾಗಿದ್ದಾರೆ. ಆದರೆ ವಾರ್ನರ್ ಈ ಕೃತ್ಯವೆಸಗಲು ಕಾರಣ ಪತ್ನಿ ಕ್ಯಾಂಡಿಸ್ ಸೆಕ್ಸ್ ಪುರಾಣವಂತೆ. ಹಾಗಂತ ಸ್ವತಃ ಕ್ಯಾಂಡಿಸ್ ಹೇಳಿಕೊಂಡಿದ್ದಾರೆ.
ರಗ್ಬಿ ಆಟಗಾರ ಸೋನಿ ಬಿಲ್ ವಿಲಿಯಮ್ಸ್ ಜತೆಗೆ ಕ್ಯಾಂಡಿಸ್ 2007 ರಲ್ಲಿ ಹೋಟೆಲ್ ಕೊಠಡಿಯೊಂದರಲ್ಲಿ ಸೆಕ್ಸ್ ಮಾಡಿದ್ದರು. ಇದೇ ಘಟನೆಯನ್ನು ವಾರ್ನರ್ ಬಳಿ ಹೇಳಿ ದ.ಆಫ್ರಿಕಾ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ಕೆಣಕಿದ್ದರು. ಇದೇ ಕಾರಣಕ್ಕೆ ಎರಡನೇ ಟೆಸ್ಟ್ ಪಂದ್ಯದ ವೇಳೆ ಇಬ್ಬರ ನಡುವೆ ಜಗಳವೇ ನಡೆದಿತ್ತು.
ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ಪ್ರೇಕ್ಷಕರೂ ಇದೇ ಘಟನೆಯನ್ನು ನೆನಪಿಸಿದ್ದರು. ಪಂದ್ಯ ನಡೆಯುತ್ತಿದ್ದಾಗ ಪದೇ ಪದೇ ಗ್ಯಾಲರಿಯಲ್ಲಿದ್ದ ಕ್ಯಾಂಡಿಸ್ ಕಡೆಗೆ ಸೋನಿ ಬಿಲ್ ಮುಖವಾಡ ತೊಟ್ಟ ಪ್ರೇಕ್ಷಕರು ಅಸಭ್ಯ ಸನ್ನೆ ಮಾಡಿ ಕೆಣಕುತ್ತಿದ್ದರು. ಇದರಿಂದ ಕೆರಳಿದ ವಾರ್ನರ್, ವಿರೂಪಕ್ಕೆ ಮುಂದಾದರು ಎಂದು ಕ್ಯಾಂಡಿಸ್ ಹೇಳಿಕೊಂಡಿದ್ದಾರೆ. ಘಟನೆ ನಡೆದ ದಿನ ಕೊಠಡಿಗೆ ಬಂದಿದ್ದ ವಾರ್ನರ್ ಭಾವುಕರಾಗಿ ನನ್ನ ಮುಖ ದಿಟ್ಟಿಸುತ್ತಾ ಕೂತರು ಎಂದು ಕ್ಯಾಂಡಿಸ್ ಹೇಳಿ ಕಣ್ಣೀರು ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ