Publish Date: Fri, 30 Mar 2018 (10:18 IST)
Updated Date: Fri, 30 Mar 2018 (10:21 IST)
ಸಿಡ್ನಿ: ದ.ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಬಾಲ್ ವಿರೂಪಗೊಳಿಸಿದ ಪ್ರಕರಣದಿಂದಾಗಿ ಒಂದು ವರ್ಷ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಈ ಹಿಂದೆಯೂ ಒಮ್ಮೆ ಇದೇ ಕೃತ್ಯವೆಸಗಿದ್ದರಂತೆ.
2016 ರಲ್ಲಿ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಶೆಫೀಲ್ಡ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ವಿಕ್ಟೋರಿಯಾ ತಂಡದ ಪರ ಆಡುತ್ತಿದ್ದ ಇವರಿಬ್ಬರು ನ್ಯೂ ಸೌತ್ ವೇಲ್ಸ್ ತಂಡದ ವಿರುದ್ಧ ಬಾಲ್ ಟೆಂಪರಿಂಗ್ ಕೃತ್ಯವೆಸಗಿದ್ದರು. ಆದರೆ ಆಗ ಅಂಪಾಯರ್ ಡೆರಿಲ್ ಹಾರ್ಪರ್ ಎಚ್ಚರಿಕೆ ನೀಡಿದ್ದರು ಎಂಬ ವರದಿಯೊಂದು ಹರಿದಾಡುತ್ತಿದೆ.
ಬೇಕೆಂದೇ ವಾರ್ನರ್ ಚೆಂಡು ಪುಟಿಯುವಂತೆ ಮಾಡಿ ಎಸೆಯುತ್ತಿದ್ದುದನ್ನು ನೋಡಿದ ಅಂಪಾಯರ್ ಗಳು ಸ್ಮಿತ್ ಗೆ ದೂರು ನೀಡಿದ್ದರಂತೆ. ಅದಾದ ಬಳಿಕ ಆ ಪಂದ್ಯದಲ್ಲಿ ಅವರು ತಮ್ಮ ಕೃತ್ಯವನ್ನು ನಿಯಂತ್ರಿಸಿದ್ದರಂತೆ. ಆದರೆ ಪಂದ್ಯ ಮುಗಿದ ಬಳಿಕ ಪಿಚ್ ಸರಿ ಇರಲಿಲ್ಲ ಎಂದು ಸ್ಮಿತ್ ತಗಾದೆ ತೆಗೆದಿದ್ದರು ಎಂದು ಆಸ್ಟ್ರೇಲಿಯನ್ ಪತ್ರಿಕೆಯೊಂದು ವರದಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ