Select Your Language

Notifications

webdunia
webdunia
webdunia
webdunia

ಐಯಾಮ್ ಸಾರಿ ಎನ್ನುತ್ತಾ ಗಳ ಗಳನೆ ಅತ್ತ ಸ್ಟೀವ್ ಸ್ಮಿತ್

ಐಯಾಮ್ ಸಾರಿ ಎನ್ನುತ್ತಾ ಗಳ ಗಳನೆ ಅತ್ತ ಸ್ಟೀವ್ ಸ್ಮಿತ್
ಸಿಡ್ನಿ , ಶುಕ್ರವಾರ, 30 ಮಾರ್ಚ್ 2018 (09:14 IST)
ಸಿಡ್ನಿ: ಚೆಂಡು ವಿರೂಪ ಪ್ರಕರಣದಿಂದ ಇದುವರೆಗೆ ಗಳಿಸಿದ ಗೌರವ ಕಳೆದುಕೊಂಡ ಭಾವದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ಕ್ಷಮೆ ಕೇಳುತ್ತಾ ಗಳ ಗಳನೆ ಅತ್ತು ಬಿಟ್ಟಿದ್ದಾರೆ.

ಜೊಹಾನ್ಸ್ ಬರ್ಗ್ ನಿಂದ ಸಿಡ್ನಿಗೆ ಬಂದಿಳಿದ ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಅಷ್ಟೇ ಅಲ್ಲ, ಇದು ತನ್ನ ನಾಯಕತ್ವದ ದೊಡ್ಡ ವೈಫಲ್ಯ ಎಂದು ಪಶ್ಚಾತ್ತಾಪದ ಶಬ್ಧ ಹೇಳಿದ್ದಾರೆ.

‘ನಿಜವಾಗಲೂ ನನಗೆ ಅತೀವ ದುಃಖವಾಗುತ್ತಿದೆ.ನನ್ನ ತಪ್ಪು ಸರಿ ಮಾಡುವಂತಹ ಯಾವುದೇ ದಾರಿಯಿದ್ದರೂ ಅದನ್ನು ಮಾಡಕ್ಕೆ ನಾನು ಸಿದ್ಧನಿದ್ದೇನೆ. ಇದು ಮುಂಬರುವ ಜನಾಂಗಕ್ಕೆ ಪಾಠವಾಗಲಿ. ಕ್ರಿಕೆಟ್ ಎಂಬ ಗ್ರೇಟ್ ಆಟವನ್ನು ನಾನು ತುಂಬಾ ಇಷ್ಟಪಡುತ್ತೇನೆ. ಈ ಆಟದ ಮೂಲಕ ಪ್ರತಿಯೊಬ್ಬರನ್ನೂ ಮನರಂಜಿಸಲು ನನಗೆ ತುಂಬಾ ಇಷ್ಟ. ಆದರೆ ನನ್ನ ತಪ್ಪಿನಿಂದಾಗಿ ಇಡೀ ಆಸ್ಟ್ರೇಲಿಯಾವೇ ಅವಮಾನ ಪಡುವಂತಾಗಿದ್ದಕ್ಕೆ ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಹೇಳುತ್ತಾ ಸ್ಮಿತ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅತ್ತ ಡೇವಿಡ್ ವಾರ್ನರ್, ಬ್ಯಾನ್ ಕ್ರಾಫ್ಟ್ ಕೂಡಾ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ಆದರೆ ಇದರಿಂದ ಆದ ನಷ್ಟವನ್ನು ತುಂಬಲು ಸಾಧ್ಯವೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದ ಈ ಕ್ರಿಕೆಟಿಗರಿಗೆ ಇನ್ನು ರಾಹುಲ್ ದ್ರಾವಿಡ್ ಅವರೇ ಮೇಸ್ಟ್ರು!