ಸಿಡ್ನಿ: ಚೆಂಡು ವಿರೂಪ ಪ್ರಕರಣದ ಬಳಿಕೆ ಆಸ್ಟ್ರೇಲಿಯಾ ನಾಯಕ ಮತ್ತು ಉಪನಾಯಕನಿಗೆ ಭಾರೀ ಹೊಡೆತ ಬಿದ್ದಿದೆ. ಈಗಾಗಲೇ ಇಬ್ಬರೂ ಐಪಿಎಲ್ ನಿಂದ ಹೊರ ಬಿದ್ದಿದ್ದಾರೆ. ಅದರ ಬೆನ್ನಲ್ಲೇ ಮತ್ತೊಂದು ಶಾಕ್ ವಾರ್ನರ್ ಗೆ ಸಿಕ್ಕಿದೆ.
									
			
			 
 			
 
 			
					
			        							
								
																	ನೇರವಾಗಿ ಚೆಂಡು ವಿರೂಪ ಮಾಡದಿದ್ದರೂ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ವಾರ್ನರ್ ವಿಲನ್ ಆಗಿದ್ದಾರೆ. ಇದೇ ಕಾರಣಕ್ಕೆ ಇದೀಗ   ಅವರ ಜೇಬಿಗೂ ಕತ್ತರಿ ಬೀಳಲಿದೆ. ಅಂದರೆ ಪ್ರಮುಖ ಇಲೆಕ್ಟ್ರಾನಿಕ್ ಸಂಸ್ಥೆ ಎಲ್ ಜಿ ವಾರ್ನರ್ ಜತೆಗಿನ  ರಾಯಭಾರಿ ಒಪ್ಪಂದ ಈ ವಾರ ಕೊನೆಗೊಳ್ಳಲಿದ್ದು, ಅದನ್ನು ಮುಂದುವರಿಸದೇ ಇರಲು ಸಂಸ್ಥೇ ತೀರ್ಮಾನಿಸಿದೆ.
									
										
								
																	ಚೆಂಡು ವಿರೂಪ ಕಳಂಕ ಹೊಂದಿರುವ ಕಾರಣಕ್ಕೆ ವಾರ್ನರ್ ಜತೆಗಿನ ಒಪ್ಪಂದ ನವೀಕರಿಸಲು ನಾವು ಬಯಸುತ್ತಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಇದರಿಂದ ವಾರ್ನರ್ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ