Select Your Language

Notifications

webdunia
webdunia
webdunia
webdunia

ಸ್ಟೀವ್ ಸ್ಮಿತ್ ಕೈ ಬಿಟ್ಟ ಛಾನ್ಸ್ ಟೀಂ ಇಂಡಿಯಾ ಆಟಗಾರನಿಗೆ ಅದೃಷ್ಟ ತಂದಿತು!

ಸ್ಟೀವ್ ಸ್ಮಿತ್ ಕೈ ಬಿಟ್ಟ ಛಾನ್ಸ್ ಟೀಂ ಇಂಡಿಯಾ ಆಟಗಾರನಿಗೆ ಅದೃಷ್ಟ ತಂದಿತು!
ನವದೆಹಲಿ , ಮಂಗಳವಾರ, 27 ಮಾರ್ಚ್ 2018 (09:07 IST)
ನವದೆಹಲಿ: ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಬಾಲ್ ವಿರೂಪಗೊಳಿಸಿದ ಆರೋಪಕ್ಕೆ ಸಿಲುಕಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸುತ್ತಿದೆ. ಐಪಿಎಲ್ ನ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆಯಿತ್ತಿದ್ದಾರೆ.

ಇದರಿಂದಾಗಿ ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿಕೊಂಡು ಕಣಕ್ಕಿಳಿಯುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಟಕ್ಕೂ ಮೊದಲೇ ಆಘಾತ ಸಿಕ್ಕಿದೆ. ಸ್ಮಿತ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆಯಿತ್ತಿರುವುದರಿಂದ ಆ ಸ್ಥಾನಕ್ಕೆ ಟೀಂ ಇಂಡಿಯಾ ಆಟಗಾರ  ಅಜಿಂಕ್ಯಾ ರೆಹಾನೆಗೆ ನಾಯಕನಾಗುವ ಅದೃಷ್ಟ ಸಿಕ್ಕಿದೆ.

ಸ್ಮಿತ್ ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಮುಂದುವರಿಯಲಿದ್ದಾರೆ. ಆದರೆ ನಾಯಕನ ಪಟ್ಟ ಭಾರತೀಯ ಆಟಗಾರನ ಪಾಲಾಗಿದೆ. ಅಂತೂ ಸ್ಮಿತ್ ಕಳೆದುಕೊಂಡ ಭಾಗ್ಯ ರೆಹಾನೆ ಪಾಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜಸ್ಥಾನ್ ರಾಯಲ್ಸ್ ಬೆನ್ನಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡವೂ ರಿಸ್ಕ್ ತೆಗೆದುಕೊಳ್ಳುತ್ತಾ?