Publish Date: Mon, 26 Mar 2018 (05:34 IST)
Updated Date: Mon, 26 Mar 2018 (05:36 IST)
ಮುಂಬೈ: ಇಂಗ್ಲೆಂಡ್ ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಸಜ್ಜಾಗಲು ಟೀಂ ಇಂಡಿಯಾ ಅವಧಿಗೆ ಮೊದಲೇ ವಿರಾಟ್ ಕೊಹ್ಲಿ ಮತ್ತು ಕೆಲವು ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರನ್ನು ಇಂಗ್ಲೆಂಡ್ ಗೆ ಕಳುಹಿಸಲು ಚಿಂತನೆ ನಡೆಸಿದೆ.
ಇದರ ಹಿಂದೆ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್, ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಯೋಜನೆಯಿದೆಯೇ? ಹಾಗೊಂದು ಸುಳಿವನ್ನು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ನೀಡಿದ್ದಾರೆ.
ರಾಹುಲ್ ಮತ್ತು ರವಿಶಾಸ್ತ್ರಿ ಜತೆ ಚರ್ಚಿಸಿ ಟೀಂ ಇಂಡಿಯಾದ ಕೆಲವು ಟೆಸ್ಟ್ ಆಟಗಾರರನ್ನು ಮೊದಲೇ ಇಂಗ್ಲೆಂಡ್ ಕಳುಹಿಸಿ ಸಿದ್ಧತೆ ನಡೆಸಲಾಗುವುದು ಎಂದು ವಿನೋದ್ ರಾಯ್ ಹೇಳಿದ್ದಾರೆ. ಈಗಾಗಲೇ ಕೊಹ್ಲಿ ಕೌಂಟಿ ಕ್ರಿಕೆಟ್ ಆಡಲು ನಿರ್ಧರಿಸಿರುವುದರ ಹಿಂದೆಯೂ ದ್ರಾವಿಡ್, ಶಾಸ್ತ್ರಿ ಲೆಕ್ಕಾಚಾರಗಳಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಂತೂ ಏನೇ ಆದರೂ ಪ್ರಮುಖ ಸರಣಿಗೆ ಮೊದಲು ಟೀಂ ಇಂಡಿಯಾವನ್ನು ಈ ಮಟ್ಟಿಗೆ ತಯಾರಿ ನಡೆಸುತ್ತಿರುವುದು ಉತ್ತಮ ಬೆಳವಣಿಗೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ